ಪಂಜಾಬ್ ಮೇಲೆ ಸವಾರಿ ಮಾಡಿದ ಚೆನ್ನೈ ಎಕ್ಸ್ಪ್ರೆಸ್: ಅರ್ಧ ಶತಕ ಬಾರಿಸಿ ಶೈನ್ ಆದ ಫಾಫ್ ಡುಪ್ಲಿಸಿಸ್

ನಿನ್ನೆ ಚೆಪಾಕ್ ಅಂಗಳದಲ್ಲಿ ನಡೆದೆ ಚೆನ್ನೈ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಧೋನಿ ಪಡೆ 22 ರನ್ಗಳ ಗೆಲುವು ದಾಖಲಿಸಿತು. ಹಾಗಾದ್ರೆ ಬನ್ನಿ ಚೆನ್ನೈ ಪಂಜಾಬ್ ಮೇಲೆ ಹೇಗೆ ಸವಾರಿ ಮಾಡಿತು ಅನ್ನೋದನ್ನ ನೋಡೋಣ.

ಡಿಸೇಂಟ್ ಓಪನಿಂಗ್ ಕೊಟ್ಟ ವ್ಯಾಟ್ಸನ್ , ಫಾಫ್ ಡುಪ್ಲೆಸಿಸ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡಕ್ಕೆ ಓಪನರ್ಸ್ಗಳಾದ ಶೇನ್ ವ್ಯಾಟ್ಸನ್ ಮತ್ತು ಫಾಫ್ ಡುಪ್ಲೆಸಿಸ್ ಡಿಸೆಂಟ್ ಓಪನಿಂಗ್ ಕೊಟ್ರು. ಆರಮಭದಲ್ಲೆ ಪಂಜಾಬ್ ಬೌಲರ್ಸ್ಗಳನ್ನ ಬೆಂಡೆತ್ತಿದ ಈ ಜೋಡಿ ಮೊದಲ ವಿಕೆಟ್ಗೆ 56 ರನ್ ಸೇರಿಸಿದ್ರು.

ಇನ್ನೇನು ಈ ಜೋಡಿ ಗಟ್ಟಿಯಾಗಿ ನಿಲ್ಲುತ್ತೆ ಅಂದುಕೊಳ್ಳುವಾಗಲೇ sಟoತಿ ಚಿಓಜ Sಣeಚಿಜಥಿ ಇನ್ನಿಂಗ್ಸ್ ಕಟ್ಟುತ್ತಿದ್ದ ಶೇನ್ ವ್ಯಾಟ್ಸನ್ ಕೇರಂ ಸ್ಪಿನ್ನರ್ ಆರ್.ಅಶ್ವಿನ್ಗೆ ಬಲಿಯಾದ್ರು.

ಅರ್ಧ ಶತಕ ಬಾರಿಸಿದ ಫಾಫ್ ಡುಪ್ಲಿಸಿಸ್
ನಂತರ ಮೂರನೇ ಸ್ಲಾಟ್ನಲ್ಲಿ ಬಂದ ಪವರ್ ಹಿಟ್ಟರ್ ಸುರೇಶ್ ರೈನಾ ಫಾಪ್ ಡುಪ್ಲೆಸಿ್ಗೆ ಒಲ್ಳೆಯ ಸಾಥ್ ಕೊಟ್ರು. ಪಂಜಾಬ್ ಬೌಲರ್ಗಳನ್ನ ಚೆಂಡಾಡಿದ ಫಾಫ್ ಡುಪ್ಲೆಸಿಸ್ 33 ಎಸೆತದಲ್ಲಿ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು. ಆದರೆ ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ . 14ನೇ ಓವರ್ನಲ್ಲಿ ಮ್ತತೆ ದಾಳಿಗಿಳಿದ ಅಶ್ವಿನ್ ಫಾಫ್ ಡುಪ್ಲೆಸಿಸ್ಗೆ ಪೆವಿಲಿಯನ್ ದಾರಿ ತೋರಿಸಿದ್ರು.

ಚೆನ್ನೈ ನಿಗದಿತ ಓವರ್ನಲ್ಲಿ 3 ವಿಕೆಟ್ಗೆ 160 ರನ್
ನಂತರ ಕೊನೆಯಲ್ಲಿ ಸುರೇಶ್ ರೈನಾ 17 ರನ್, ಎಂಎಸ್.ಧೋನಿ ಅಜೇಯ 37, ಅಂಬಟಿ ರಾಯ್ಡು ಅಜೇಯ 21 ರನ್ ಗಳಿಸಿದ್ರು. ಚೆನ್ನೈ ನಿಗದಿತ ಓವರ್ನಲ್ಲಿ 3 ವಿಕೆಟ್ಗೆ 160 ರನ್ ಕಲ ಹಾಕಿತು.

ಆರಂಭಿಕ ಆಘಾತ ಅನುಭವಿಸಿದ ಪಂಜಾಬ್
161 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ತಂಡ ಆರಂಭದಲ್ಲೆ ಓಪನರ್ ಕ್ರಿಸ್ ಗೇಲ್ ಮತ್ತು ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಮೂರನೇ ವಿಕೆಟ್ಗೆ ಜೊತೆಗೂಡಿದ ಕೆ,ಎಲ್. ರಾಹುಲ್ ಮತ್ತು ಸರ್ಫಾರಾಜ್ ಖಾನ್ 110 ರನ್ ಸೇರಿಸಿ ಪಂದ್ಯ್ಕಕೆ ತಿರುವು ಕೊಟ್ರು. ಆದರೆ 55 ರನ್ ಗಳಿಸಿ ಮುನ್ನಗುತ್ತಿದ್ದ ಕನ್ನಡಿಗ ರಾಹುಲ್ ಕಗ್ಲಿನ್ಗೆ ಬಲಿಯಾದ್ರು.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 22 ರನ್ ಜಯ
ಸರ್ಫಾರಾಜ್ ಖಾನ್ ಏಕಾಂಗಿ ಹೋರಾಟ ಮುಂದುವರೆಸಿ ಅರ್ಧ ಶತಕ ಬಾರಿಸಿದರಾದ್ರು ಪ್ರಯೋಜನಾವಾಗಲಿಲ್ಲ. ಡೇವಿಡ್ ಮಿಲ್ಲರ್ 6, ಮನ್ದೀಪ್ ಸಿಂಗ್ 1 ರನ್ ಗಳಿಸದ್ರು. ಚೆನ್ನೈ ತಂಡ 22 ರನ್ ಗೆಲುವು ದಾಖಲಿಸಿ ಟೂರ್ನಿಯಲ್ಲಿ ನಾಲ್ಕನೆ ಗೆಲುವು ಪಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ