ಇಂದು ಆರ್‍ಸಿಬಿ, ಡೆಲ್ಲಿ ಫೈಟ್ : ಜೈಪುರದಲ್ಲಿ ರಾಜಸ್ತಾನ ಕೋಲ್ಕತ್ತಾ ಫೈಟ್

ಐಪಿಎಲ್ನಲ್ಲಿ ಇಂದು ಕೂಡ ಡಬಲ್ ಧಮಕಾ ವೀಕೆಂಡ್ನಲ್ಲಿ ಅಬಿಮಾನಿಗಳನ್ನ ರಂಜಿಸೋಕೆ ನಾಲ್ಕು ತಂಡಗಳು ಕಣಕ್ಕಿಳಿಯುತ್ತಿವೆ. ಮೊದಲ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಕಾದಾಟ ನಡೆಸಲಿವೆ. ಗೆಲುವನ್ನ ಕಾಣದ ಆರ್ಸಿಬಿಗೆ ಡೆಲ್ಲಿ ವಿರುದ್ಧದ ಗೆಲುವು ಅತ್ಯವಶ್ಯಕ. ಇನ್ನು ಡೆಲ್ಲಿ ತಂಡ ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಮೂರರಲ್ಲಿ ಸೋಲು ಕಂಡಿದೆ. ಐಪಿಎಲ್ನ ಇತಿಹಾಸದಲ್ಲಿ ಈ ಎರಡು ತಂಡಗಳ ಒಟ್ಟಾರೆ ಮುಖಾಮುಖಿಯನ್ನ ಗಮನಿಸೋದಾದ್ರೆ, ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳೂ ಐಪಿಎಲ್‌ನಲ್ಲಿ 21 ಪಂೆದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದ್ರಲ್ಲಿ, ಆರ್‌ಸಿಬಿ 13 ಪಂದ್ಯಗಳಲ್ಲಿ ಗೆದ್ದಿದ್ರೆ, ಡೆಲ್ಲಿ ಕೇವಲ 7 ಮ್ಯಾಚ್‌ಗಳಲ್ಲಿ ಮಾತ್ರ ಜಯ ಕಂಡಿದೆ. ಹೀಗಾಗಿ ಆರ್‌ಸಿಬಿಗೆ ಗೆಲುವಿನ ಪರ್ಸೆಂಟೇಜ್ ಹೆಚ್ಚು. ಎಲ್ಲಕ್ಕಿಂತ ಹೆಚ್ಚಾಗಿ ವಿರಾಟ್ ಪಡೆಗೆ ತವರಿನ ಅಡ್ವಾಂಟೇಜ್ ಬೇರೆ. ಆದ್ರೆ, ಗೆಲುವೇ ಅನಿವಾರ್ಯವಾಗಿರೋ ಪಂದ್ಯದಲ್ಲಿ ಆರ್‌ಸಿಬಿ ಹೇಗೆ ಆಡುತ್ತೆ ಅನ್ನೋ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿದೆ.

ಇನ್ನು ಇವತ್ತಿನ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ರೈಟರ್ಸ್ ಮತ್ತು ರಾಜಸ್ತಾನ ತಂಡಗಳು ಜೈಪುರದಲ್ಲಿ ಮುಖಾಮುಖಿಯಾಗುತ್ತಿವೆ. ಟೂರ್ನಿಯಲ್ಲಿ ಕೋಲ್ಕತ್ತಾ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ 3 ಪಂದ್ಯಗಳನ್ನ ಗೆದ್ದು ಒಂದರಲ್ಲಿ ಸೋಲು ಕಂಡಿದ್ರೆ, ರಾಜಸ್ತಾನ ತಂಡ ನಾಲ್ಕು ಪಂದ್ಯಗಳಲ್ಲಿ ಒಂದು ಪಂದ್ಯವನ್ನ ಮಾತ್ರ ಗೆದ್ದು ಮೂರು ಪಂದ್ಯಗಳನ್ನ ಕೈಚೆಲ್ಲಿಕೊಂಡಿದೆ. ಐಪಿಎಲ್ನ ಇತಿಹಾಸದಲ್ಲಿ ಈ ಎರಡು ತಂಡಗಳ ಒಟ್ಟಾರೆ ಮುಖಾಮುಖಿಯನ್ನ ನೋಡೋದಾದ್ರೆ, ರಾಜಸ್ತಾನ ಮತ್ತು ಮತ್ತು ಕೋಲ್ಕತ್ತಾ ತಂಡಗಳು 18 ಬಾರಿ ಮುಖಾಮುಖಿಯಾಗಿದ್ದು ಎರಡು ತಂಡಗಳು ತಲಾ 9 ಬಾರಿ ಗೆದ್ದು ಸಮಬಲದ ಫಲಿತಾಂಶಗಳನ್ನ ಪಡೆದುಕೊಂಡು ಬಂದಿವೆ. ಹೀಗಾಗಿ ಸಮಬಲದ ಹೋರಾಟದ ನಿರೀಕ್ಷೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ