ಬೆಂಗಳೂರು, ಏ.7-ಊರಿಗೆ ಅರಸನಲ್ಲ, ಹೆತ್ತವರಿಗೆ ಮಗನಲ್ಲ. ರಾಜಕೀಯ ಪರಿತ್ಯಾಜ್ಯ ಎಂದಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ.
ಸೂಳ್ಯದಲ್ಲಿ ಜನಿಸಿ, ಪುತ್ತೂರಿನಲ್ಲಿ ಚುನಾವಣೆಗೆ ನಿಂತು ಅಲ್ಲಿಂದ ಉಡುಪಿಗೆ ಕಾಲ್ಕಿತ್ತು, ಮತ್ತೆ ಬೆಂಗಳೂರಿಗೆ ಬಂದಿರುವ ನಿಮಗೆ ಸ್ವಂತ ವಿಳಾಸವಿದೆಯೇ ಸದಾನಂದಗೌಡರೇ?ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದಕ್ಕೂ ಮೊದಲು ಸದಾನಂದಗೌಡ ಅವರು ಮಾನ್ಯ ಸಿದ್ದರಾಮಯ್ಯನವರೇ, ನನ್ನ ಸಾಧನೆ ಏನೆಂದು ತಿಳಿಸಲು ನಿಮ್ಮ ಅಡ್ರೆಸ್ ಕೇಳಿದ್ದೆ. ಆದರೆ ಅದು ನಿಮಗಿಲ್ಲ, ಹಾಗಾಗಿ ನೀವು ಕೊಡಲಿಲ್ಲ. ನೀವು ಊರಿಗೆ ಅರಸನಲ್ಲ, ಹೆತ್ತೂರಿಗೆ ಮಗನೂ ಅಲ್ಲ. ಒಂಥರಾ ರಾಜಕೀಯ ಪರಿತ್ಯಾಜ್ಯ ನೀವು. ಹಾಗಾಗಿ ನಿಮಗೆ ಅಡ್ರೆಸ್ ಇಲ್ಲ ಎಂದು ಲೇವಡಿ ಮಾಡಿದ್ದರು.
ಈ ಇಬ್ಬರು ನಾಯಕರ ಅಡ್ರೆಸ್ ವಾರ್ ಟ್ವೀಟರ್ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಾವಿರಾರು ಮಂದಿ ರೀಟ್ವೀಟ್ ಮಾಡಿದ್ದಾರೆ.