ಆರ್ಸಿಬಿ ಗೆಲ್ಲಬೇಕಾದ್ರೆ ಬಳಸಬೇಕು ಮೂರು ತಂತ್ರ : ಈ ಮೂರು ವೆಪನ್ ಬಳಿಸಿದ್ರೆ ಕೋಲ್ಕತ್ತಾ ಉಡೀಸ್

ಹೌದು.. ಪ್ರಸಕ್ತ ಟೂರ್ನಿಯಲ್ಲಿ ಸತತ ಸೋಲುಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿರಾಸೆ ಅನುಭವಿಸಿದೆ. ಟೂರ್ನಿಯಲ್ಲಿ ಇನ್ನಿಲ್ಲದ ಸರ್ಕಸ್ ಮಾಡಿದ್ರೂ, ಉಳಿದೆಲ್ಲಾ ತಂಡಗಳು ಗೆಲುವಿನ ಸಿಹಿ ಕಂಡ್ರೂ ಆರ್ಸಿಬಿಗೆ ಮಾತ್ರ ಗೆಲುವೆಂಬುವುದು ಮರಿಚಿಕೆ ಆಗಿದೆ.. ಇನ್ನು ವಿರಾಟ್ ಕೊಹ್ಲಿ ಪಡೆಯ ಕೆಟ್ಟ ಆಟ ಪ್ರದರ್ಶನಕ್ಕೆ ಆರ್ಸಿಬಿ ಅಭಿಮಾನಿಗಳು ಒಂದೆಡೆ ಗರಂ ಆಗಿದ್ದಾರೆ.. ಹೀಗಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ತಂಡ ಗೆಲ್ಲಬೇಕಾದ್ರೆ ಈ ಮೂರು ತಂತ್ರಗಳನ್ನು ಅನುಸರಿಸಬೇಕಿದೆ… ಆ ಮೂರು ತಂತ್ರಗಳನ್ನು ಏನು ಅನ್ನೊದನ್ನ ನಾವು ತೋರಿಸ್ತೀವಿ ನೋಡಿ..

ಆರ್ಸಿಬಿಗೆ ಬೇಕು ಸೂಪರ್ ಓಪನರ್ಸ್
ಕೆರಿಬಿಯನ್ ಕಿಂಗ್ ಕ್ರಿಸ್ ಗೇಲ್ ಆರ್ಸಿಬಿಯಿಂದ ಹೊರಗೆ ಹೋದ ಬಳಿಕ ತಂಡಕ್ಕೆ ಕಾಡ್ತಿರೋ ದೊಡ್ಡ ಸಮಸ್ಯೆ ಅಂದ್ರೆ ಆರಂಭಿಕರ ಸಮಸ್ಯೆ. ಗೇಲ್ ಹೋದ ಬಳಿಕ ಅವ್ರ ಜಾಗಕ್ಕೆ ಬೆಸ್ಟ್ ಒಪನರ್ಸ್ಳನ್ನ ಕರೆತರುವಲ್ಲಿ ಆರ್ಸಿಬಿ ಫ್ರಾಂಚೈಸಿ ವಿಫಲವಾಗಿದೆ.. ಪ್ರಸಕ್ತ ಸರಣಿಯಲ್ಲೇ ಆರ್ಸಿಬಿ ಮೂವರು ಓಪನರ್ಸ್ ಕಾಂಬಿನೇಷನ್ ಕಣಕ್ಕಿಳಿಸಿ ಈಗಾಗಲೇ ಕೈ ಸುಟ್ಟುಕೊಂಡಿದೆ.. ಪಾರ್ಥಿವ್ ಪಟೇಲ್ ಜೋಡಿಯಾಗಿ ವಿರಾಟ್ ಕೊಹ್ಲಿ, ಶಿಮ್ರಾನ್ ಹೇಟ್ಮಾರ್, ಮೊಯಿನ್ ಅಲಿರನ್ನ ಪ್ರಯೋಗಿಸಿ ಫೇಲ್ ಆಗಿದೆ..

ಹೀಗಾಗಿಯೇ ಪಾರ್ಥಿವ್ ಪಟೇಲ್ಗೆ ಸಾಥ್ ನೀಡುವಂತ ಉತ್ತಮ ಆರಂಭಿಕ ಆಟಗಾರನ ಅವಶ್ಯಕತೆ ಇದೆ.. ಸದ್ಯ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ದೇ ಟಾಪ್ ಅರ್ಡರ್ನಲ್ಲಿ ಬ್ಯಾಟಿಂಗ್ ಮಾಡಿರೋ ಅನುಭವ ಸಹ ವಿರಾಟ್ ಕೊಹ್ಲಿಯ ಬೆನ್ನಿಗಿರೋದ್ರಿಂದ ಆರಂಭಿಕನಾಗಿ ಕೊಹ್ಲಿ ಕಣಕ್ಕಿಳಿಯೋದು ಉತ್ತಮ..

ಬೌಲಿಂಗ್ನಲ್ಲಿ ಶೈನ್ ಆಗಬೇಕು ಬೌಲರ್ಸ್
ಆರ್ಸಿಬಿ ತಂಡದ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಅದು ಬೌಲಿಂಗ್ ಡಿಪಾರ್ಟ್ಮೆಂಟ್. ಸದ್ಯ ತಂಡದಲ್ಲಿ ವಿಕೆಟ್ ಕೀಳುವಂತ ಬೌಲರ್ ಯಜುವೇಂದ್ರ ಚಹಲ್ ಬಿಟ್ಟರೆ ಮತ್ಯಾವ ಆಟಗಾರನೂ ವಿಕೆಟ್ ಕಬಳಿಸುವಲ್ಲಿ ವಿಫಲರಾಗಿದ್ಧಾರೆ.. ಮುಖ್ಯವಾಗಿ ವೇಗಿಗಳು ವಿಕೆಟ್ ಕೀಳೋದ್ರಲ್ಲಿ ವಿಫಲವಾಗಿದ್ದಾರೆ. ಹೀಗಾಗಿಯೇ ತಂಡದ ಬೌಲಿಂಗ್ ಡಿಪಾರ್ಟ್ಮೆಂಟ್ ಬಲಿಷ್ಠವಾಗಬೇಕೆಂದರೆ ಬ್ಯಾಟ್ಸ್ಮನ್ಗಳನ್ನು ಯಾಮಾರಿಸಿ ವಿಕೆಟ್ ಕಬಳಿಸೋ ಅಂತ ಬೌಲರ್ ತಂಡಕ್ಕೆ ಬೇಕು. ಅಂತಹ ಸ್ಥಾನವನ್ನು ತುಂಬಬಲ್ಲ ಆಟಗಾರ ಆಸಿಸ್ ವೇಗಿ ನಾಥನ್ ಕಲ್ಟರ್ ನೈಲ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡಬೇಕು.. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿರೋ ಅನುಭವ ಹೊಂದಿರೋ ಕಲ್ಟರ್ ನೈಲ್ ಬ್ಯಾಟ್ಸ್ಮನ್ಗಖನ್ನು ಯಾಮಾರಿಸಿ ವಿಕೆಟ್ ಕಿಳೋದ್ರಲ್ಲಿ ಎತ್ತಿದ ಕೈ.. ಹೀಗಾಗಿಯೇ ಶಿಮ್ರಾನ್ ಹೇಟ್ಮಾರ್ ಅಥವಾ ಮೊಯಿನ್ ಅಲಿ ಸ್ಥಾನವನ್ನು ತ್ಯಾಗ ಮಾಡಬೇಕಿದೆ.. ಸ್ಲಾಗ್ ಓವರ್ಗಳಲ್ಲಿ ಬ್ಯಾಟಿಂಗ್ ಸಹ ನಡೆಸಬಲ್ಲ ನಾಥನ್ ಕಲ್ಟರ್ ನೈಲ್, ಆಲ್ರೌಂಡರ್ ಮೊಯಿನ್ ಅಲಿ ಜಾಗಕ್ಕೆ ರಿಪ್ಲೇಸ್ ಮಾಡೋದು ಉತ್ತಮ.

ಸುಂದರ್, ಪವನ್ ನೇಗಿಗೆ ತಂಡದಲ್ಲಿ ಸ್ಥಾನ ನೀಡಿದ್ರೆ ಬೆಸ್ಟ್
ಹೌದು.. ಐಪಿಎಲ್ ಹಾಗೂ ದೇಶಿ ಕ್ರಿಕೆಟ್ನಲ್ಲಿ ಆಡಿರೋ ಅನುಭವ ಹೊಂದಿರೋ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಪವನ್ ನೇಗಿಗೆ ಅವಕಾಶ ನೀಡೋದು ಬೆಸ್ಟ್.. ಅಲ್ರೌಂಡರ್ ಮೊಯಿನ್ ಅಲಿ ಜಾಗಕ್ಕೆ ನಾಥನ್ ಕಲ್ಟರ್ ನೈಲ್ ರಿಪ್ಲೇಸ್ ಮಾಡೋದ್ರಿಂದ ಆರ್ಸಿಬಿ ಬೌಲಿಂಗ್ ಲೈನ್ಅಪ್ ಬಲಿಷ್ಠವಾಗಲಿದೆ. ಅಲ್ದೇ ಮೊಯಿನ್ ಅಲಿಗಿಂತ ವಾಷಿಂಗ್ಟನ್ ಸುಂದರ್ ಬೆಸ್ಟ್ ಬ್ಯಾಟ್ಸ್ಮನ್,ಹೀಗಾಗಿ ತಂಡದಲ್ಲಿ ಸ್ಥಾನ ನಿಡೋದ್ರಿಂದ ಆರ್ಸಿಬಿ ಬ್ಯಾಟಿಂಗ್ ಸ್ಟ್ರೆಂಥ್ ಮತ್ತಷ್ಟು ಹೆಚ್ಚಲಿದೆ.

ಮೊಹಮ್ಮದ್ ಸಿರಾಜ್ ಉತ್ತಮ ದಾಳಿ ಸಂಘಟಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಸಿರಾಜ್ ಬದಲಿಗೆ ಪವನ್ ನೇಗಿಗೆ ಚಾನ್ಸ್ ನೀಡೋದು ಉತ್ತಮ. ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡಬಲ್ಲ ನೇಗಿ ಸ್ಲಾಗ್ ಓವರ್ಗಳಲ್ಲಿ ರನ್ಗಳ ಸುರಿಮಳೆ ಹರಿಸುವ ಜೊತೆಗೆ ಬೌಲಿಂಗ್ನಲ್ಲೂ ಶೈನ್ ಆಗಬಹುದು.

ಒಟ್ನಾಲ್ಲಿ ಆರ್ಸಿಬಿ ಇಂದು ಗೆಲುವಿನ ಖಾತೆ ತೆರೆಯಬೇಕಿದ್ರೆ ಈ ಮೂರು ತಂತ್ರಗಳನ್ನ ಅನುಸರಿಸಲೇಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ