ಇಂದು ಆರ್ಸಿಬಿ-ಕೆಕೆಆರ್ ನಡುವೆ ಬಿಗ್ ಫೈಟ್ : ಗೆಲುವಿನ ಖಾತೆ ತೆರೆಯುತ್ತಾ ಆರ್ಸಿಬಿ ?

ಬ್ಯಾಕ್ ಟು ಬ್ಯಾಕ್ ನಾಲ್ಕು ಪಂದ್ಯಗಳನ್ನ ಸೋತು ಭಾರೀ ಮುಖಭಂಗ ಅನುಭವಿಸಿರುವ ಆರ್ಸಿಬಿ ತಂಡ ಇಂದು ತವರಿನಲ್ಲಿ ಬಲಿಷ್ಠ ಕೋಲ್ಕತ್ತಾ ನೈಟ್ರೈಡರ್ಸ್ ತಂಡವನ್ನ ಎದುರಿಸಲಿದೆ. ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ತವರು ಅಭಿಮಾನಿಗಳೆದುರು ಆಡುತ್ತಿರುವ ಕೊಹ್ಲಿ ಬಾಯ್ಸ್ ಗೆಲ್ಲಲ್ಲೇಬೇಕಾದ ಒತ್ತಡದಲ್ಲಿ ಸಿಲುಕಿದೆ. ಹಾಗಾದ್ರೆ ಬನ್ನಿ ಆರ್ಸಿಬಿ – ಕೋಲ್ಕತ್ತಾ ನಡುವಿನ ಕಾದಾಟದ ಕಂಪ್ಲೀಟ್ ಏನು ಅನ್ನೊದನ್ನ ನೋಡೋಣ.

ಸತತ ಸೋಲುಗಳಿಂದ ಕಂಗೆಟ್ಟಿದೆ ರಾಯಲ್ ಚಾಲೆಂಜರ್ಸ್
ಆಡಿದ ನಾಲ್ಕು ಪಂದ್ಯಗಳನ್ನ ಸೋತಿರುವ ಆರ್ಸಿಬಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಲು ಇಂದು ಇನ್ನಿಲ್ಲದ ಹೋರಾಟ ಮಾಡಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಹೀನಾಯವಾಗಿ ಸೋತರೇ ತವರಿನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಅಂಪೈರ್ ಮಾಡಿದ ಯಡವಟ್ಟಿನಿಂದ ಸೋತಿತ್ತು. ಮೂರನೇ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ ಚೇಸಿಂಗ್ನಲ್ಲಿ ಸೋತಿತ್ತು. ಇನ್ನು ನಾಲ್ಕನೆ ಪಂದ್ಯದಲ್ಲಿ ರಾಜಸ್ತಾನ ವಿರುದ್ಧ ಕ್ಯಾಚ್ಗಳನ್ನ ಕೈಚೆಲ್ಲಿ ಪಂದ್ಯವನ್ನೆ ಕೈಚೆಲ್ಲಿತ್ತು.

ಇದೀಗ ಆರ್ಸಿಬಿ ಟೂರ್ನಿಯಲ್ಲಿ ಐದನೇ ಪಂದ್ಯವಾಡುತ್ತಿದ್ದು ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ ಎದುರಿಸುತ್ತಿರುವ ಆರ್ಸಿಬಿ ಗೆಲುವು ಅಷ್ಟು ಸುಲಭವಾಗಿಲ್ಲ. ಯಾಕಂದ್ರೆ ಕೋಲ್ಕತ್ತಾ ತಂಡ ಆಡಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನ ಗೆದ್ದಿದ್ದು ಒಂದು ಪಂದ್ಯವನ್ನ ಮಾತ್ರ ಕೈಚೆಲ್ಲಿ ಟೂರ್ನಿಯಲ್ಲಿ ಬಲಿಷ್ಠ ತಂಡವನ್ನಾಗಿ ಗುರುತಿಸಿಕೊಂಡಿದೆ. ಆರ್ಸಿಬಿಗೆ ತವರಿನ ಬಲ ಒಂದೇ ಮಾನದಂಡವಾಗಿದೆ.

ತಂಡಕ್ಕೆ ಮೇಜರ್ ಸರ್ಜರಿ ಮಾಡಲಿದ್ದಾರೆ ಕ್ಯಾಪ್ಟನ್ ಕೊಹ್ಲಿ
ಸತತ ವೈಫಲ್ಯ ಅನುಭವಿಸಿರುವ ತಂಡಕ್ಕೆ ಕ್ಯಾಪ್ಟನ್ ಕೊಹ್ಲಿ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದಾರೆ. ಒಳ್ಳಯೆ ತಂಡವನ್ನ ಕಣಕ್ಕಿಳಿಸೋದೇ ಕೊಹ್ಲಿ ಬಿಗ್ ಚಾಲೆಂಜ್ ಆಗಿದೆ. ತಂಡದಲ್ಲಿ ಪಾರ್ಥಿವ್ ಪಟೇಲ್ ಬಿಟ್ಟರೆ ಇತರೆ ಬ್ಯಾಟ್ಸ್ಮನ್ ರನ್ಗಳಿಕೆಯಲ್ಲಿ ಹಿಂದಿದ್ದಾರೆ.. ಶಿಮ್ರಾನ್ ಹೇಟ್ಮಾರ್, ಮೊಹಿನ್ ಆಲಿ ಸತತ ಫ್ಲಾಪ್ ಆದ್ರೂ ಮತ್ತೆ ಮತ್ತೆ ಅವಕಾಶ ನೀಡಿ ಕೈ ಸುಟ್ಟುಕೊಂಡಿರೋ ಕೊಹ್ಲಿಗೆ ಸಮತೋಲನದ ತಂಡ ಕಣಕ್ಕಿಳಿಸುವ ಅನಿವಾರ್ಯತೆ ಎದರುರಾಗಿದೆ.

ನ್ಯೂಜಿಲ್ಯಾಂಡ್ನ ಟೀಮ್ ಸೌಥಿ, ನಾಥನ್ ಕಲ್ಟರ್ ನೈಲ್, ಹೆನ್ರಿಕ್ ಕ್ಲಾಸೇನಾಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ನೀಡಿದ್ರೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಿಸಬಹುದು.

ಕೆಕೆಆರ್ ವಿರುದ್ಧ ಗೆಲುವಿಗಾಗಿ ಆರಂಭಿಕ ಆಟಗಾರ ಪಾರ್ಥಿವ್ ಪಟೇಲ್, ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ತಮ್ಮ ನೈಜ ಆಟದ ಮೂಲಕ ತಂಡಕ್ಕೆ ಜಯದ ಮಾಲೆ ತೊಡಿಸಬೇಕಿದೆ. ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ವೇಗಿಗಳಾದ ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ಸಾಂಘಿಕ ಹೋರಾಟ ನಡೆಸಲೇಕು.. ಸದ್ಯ ಆರ್ಸಿಬಿಯಲ್ಲಿ ಉತ್ತಮ ಪ್ರದರ್ಶನ ನೀಡ್ತಿರೋ ಆಟಗಾರ ಯಜುವೇಂದ್ರ ಚಹಲ್ ತಮ್ಮ ಚಾರ್ಮ್ ಮುಂದುವರಿಸಬೇಕಿದೆ.

ಗೆಲುವಿನ ಟ್ರ್ಯಾಕ್ಗೆ ಮರಳಲು ಕೆಕೆಆರ್ ಪ್ಲಾನ್
ಕಳೆದ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಡೆಲ್ಲಿ ವಿರುದ್ಧ ಸೋತಿರುವ ಕೆಕೆಆರ್, ಇಂದಿನ ಪಂದ್ಯವನ್ನ ಗೆದ್ದು ಗೆಲುವಿನ ಟ್ರ್ಯಾಕ್ಗೆ ಮರಳಲು ಪ್ಲಾನ್ ಮಾಡಿದೆ. ಇನ್ನೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್, ಬೌಲಿಂಗ್ ಸದೃಢವಾಗಿದ್ದು ಗೆಲ್ಲುವ ಉತ್ಸುಕದಲ್ಲಿದೆ.. ಕ್ರಿಸ್ ಲೀನ್, ರಾಬಿನ್ ಉತ್ತಪ್ಪ, ನಾಯಕ ದಿನೇಶ್ ಕಾರ್ತಿಕ್, ಶುಭ್ಮನ್ಗಿಲ್ ಕೆಕೆಆರ್ ತಂಡದ ಬ್ಯಾಟಿಂಗ್ ಸ್ಟಾರ್ಸ್ ಆಗಿದ್ಧಾರೆ. ಅಲ್ರೌಂಡರ್ ರಸೆಲ್ ಬೌಲಿಂಗ್ ಸಿಡಿದೆದ್ರೆ ಆರ್ಸಿಬಿ ಉಡೀಸ್ ಆಗೋದ್ರಲ್ಲಿ ಅನುಮಾನವೇ ಇಲ್ಲ… ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಲೂಕಿ ಫರ್ಗ್ಯೂಸನ್, ಕನ್ನಡಿಗ ಪ್ರಸಿದ್ಧ್ ಕೃಷ್ಣ, ಸ್ಪಿನ್ನರ್ಗಳಾದ ಪಿಯೂಷ್ ಚಾವ್ಲಾ, ಕುಲ್ದೀಪ್ ಯಾದವ್ ಪಂಜಾಬ್ ಬ್ಯಾಟ್ಸ್ಮನ್ಗಳ ರನ್ದಾಹ ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಆರ್ಸಿಬಿ -ಕೆಕೆಆರ್ ಮುಖಾಮುಖಿ
ಒಟ್ಟು ಪಂದ್ಯಗಳು 23
ಕೆಕೆಆರ್ 14
ಆರ್ಸಿಬಿ 09
ರಾಯಲ್ ಚಾಲೆಂಜರ್ಸ್- ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು, ಕೋಲ್ಕತ್ತಾ ನೈಟ್ರೈಡರ್ಸ್ 14 ಪಂದ್ಯಗಳಲ್ಲಿ ಗೆದ್ದಿದ್ರೆ. ರಾಯಲ್ ಚಾಲೆಂಜರ್ಸ್ ಕೇವಲ 9 ಪಂದ್ಯಗಳನ್ನ ಮಾತ್ರ ಗೆದ್ದಿದೆ.

ಒಟ್ನಲ್ಲಿ ಜಯದ ಸಿಹಿ ಕಾಣದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದ್ಕಡೆ ಜಯದ ಹುಡುಕಾಟದಲ್ಲಿದ್ರೆ, ಅತ್ತ ಹಾಗೇದ್ರೂ ಮಾಡಿ ಆರ್ಸಿಬಿ ಮೇಲೆ ಸವಾರಿ ಮಾಡೋ ರಣತಂತ್ರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ