ನವದೆಹಲಿ: 2017ರಲ್ಲಿ ಸಿಆರ್ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿ ಯುಎಇಯಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಸಂಚುಕೋರ ನಿಸಾರ್ ಅಹ್ಮದ್ ತಂತ್ರೆಯನ್ನು ಯುಎಇ ಆಡಳಿತ ಭಾರತದ ವಶಕ್ಕೆ ಒಪ್ಪಿಸಿದೆ.
ಜಮ್ಮು ಮತ್ತು ಕಾಶ್ಮೀರದ ಲೇತ್ಪೋರಾದಲ್ಲಿ 2017ರ ಡಿಸೆಂಬರ್ 30ರ ತಡರಾತ್ರಿ ಸಿಆರ್ಪಿಎಫ್ ಶಿಬಿರದ ಮೇಲೆ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.
ವಿಶೇಷ ವಿಮಾನದಲ್ಲಿ ತಂತ್ರೆಯನ್ನು ನವದೆಹಲಿಗೆ ಕರೆತಂದು, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಯುಎಇಯಲ್ಲಿ ಅಡಗಿಕೊಂಡಿದ್ದ ತಂತ್ರೆ ವಿರುದ್ಧ ಎನ್ಐಎ ಅಧಿಕಾರಿಗಳು ಎನ್ಐಎ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.
India gets custody of 2017 CRPF camp attack plotter from UAE