ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರಿಂದ ಭರ್ಜರಿ ಪ್ರಚಾರ

ಹುಣಸೂರು, ಏ.3-ಕೊಡಗು ಮತ್ತು ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅವರು ಹನಗೋಡು ಹಾಗು ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಹನಗೋಡು ಬಳಿಯ ದೊಡ್ಡೂರು ಗ್ರಾಮದ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಜೆಡಿಎಸ್- ಕಾಂಗ್ರೆಸ್ ನೂರಾರು ಕಾರ್ಯಕರ್ತರೊಂದಿಗೆ ಮತ ಪ್ರಚಾರ ಮಾಡಿದರು

ತಾಲ್ಲೂಕಿನ ಹನಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಣಕುಪ್ಪೆ ಕಲ್ಲಳ್ಳಿ ಹಾಡಿನಲ್ಲಿ ಕೊತ್ತೇಗಾಲ ಯಮಗುಂಬ ಸೇರಿದಂತೆ ಹಾಗೂ ಗಾವಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಳಲವಾಡಿ, ಬಿಳಿಗೆರೆ, ಮಾರಗೌಡನಹಳ್ಳಿ, ತೊಂಡಾಳು, ಮುಳ್ಳೂರು, ಸೇರಿದಂತೆ ಇಪ್ಪತ್ತೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು.

2004ರಲ್ಲಿ ನಾನು ಸಂಸದನಾಗಿ ತಾಲ್ಲೂಕಿನ ರೈತರಿಗೆ ತಂಬಾಕು ಲೈಸೆನ್ಸ್ ನೀಡಿ ಬಳಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದೇನೆ ತಂಬಾಕು ಬೆಳೆಗಾರರಿಗೂ ಅರ್ಧದಷ್ಟು ಸಮಸ್ಯೆ ಎದುರಾಗಿದೆ.ಅದನ್ನು ಬಗೆಹರಿಸಲು ಮತ್ತೊಮ್ಮೆ ನನಗೆ ಇದೊಂದು ಬಾರಿ ರೈತರು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಎಚ್.ಪಿ .ಮಂಜುನಾಥ್ ಮಾತನಾಡಿ, ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ ಸಿಂಗ ಅವರು ರೈತರ 76.ಸಾವಿರ ಕೋಟಿ ರು ಸಾಲ ಮನ್ನಾ ಮಾಡಿದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸಂಘಗಳಲ್ಲಿ ರೈತರು ಪಡೆದಿದ್ದ 50 ಸಾವಿರ ರೂ ಸಾಲ ಮನ್ನಾ ಮಾಡಿದರು ಹಾಗೂ ಕಾಂಗ್ರೆಸ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚï ಡಿ ಕುಮಾರಸ್ವಾಮಿ ಅವರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಪಡೆದಿರುವ ಕೃಷಿ ಸಾಲ ಮನ್ನಾ ಮಾಡಿದರೆ. ಹಾಗೂ ನಮ್ಮ ಪ್ರಣಾಳಿಕೆಯಲ್ಲಿ ರಾಹುಲ ಗಾಂಧಿ ಅವರು ಬಿಪಿಎಲ ಕಾರ್ಡ ಹೊಂದಿರುವವರಿಗೆ ಮಾಸಿಕ 12ಸಾವಿರ ರೂ ಬಡವರಿಗೆ ಖಾತೆಗೆ ಬೀಳಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಮ್ಮ ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಸೋಮಶೇಖರ್, ಗುರುಸ್ವಾಮಿ, ಎಪಿ ಸ್ವಾಮಿ, ಈಶ್ವರ ಯಶೋಧರಪುರ ಸತೀಶ್, ಹಾಗೂ ಕಲ್ಲಳ್ಳಿ ಗ್ರಾಮಸ್ಥರಾದ ವಿಷಕಂಠಪ್ಪ, ಮಹಾದೇವಪ್ಪ ನಾಗಣ್ಣ ಚಂದ್ರು ಹೃಷಿಕೇಶ ಸ್ವಾಮಣ್ಣ ನೂರಾರು ರೈತರು ಉಪಸ್ಥಿತರಿದ್ದರು .

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ