ಉತ್ತಮ ಆಡಳಿತ ನೀಡುವಲ್ಲಿ ಪ್ರಧಾನಿ ವಿಫಲವಾಗಿದ್ದಾರೆ-ಸಂಸದ ಆರ್.ಧ್ರುವನಾರಾಯಣ್

ಕೊಳ್ಳೇಗಾಲ, ಏ.3- ಕಳೆದ 2014 ರ ಲೋಕಸಭಾ ಚುನಾವಣೆಯಲ್ಲಿ 283 ಸ್ಥಾನಗಳ ನಿಚ್ಚಳ ಬಹುಮತದೊಡನೆ ಸರ್ಕಾರ ರಚಿಸಿದ ಪ್ರಧಾನಿ ನರೇಂದ್ರ ಮೋದಿಗೆ ಆಡಳಿತ ನಡೆಸಲು ಒಳ್ಳೆಯ ಅವಕಾಶವಿತ್ತು.ಆದರೆ ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಸಂಸದ ಆರ್.ಧೃವನಾರಾಯಣ್ ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಮಧುವನಹಳ್ಳಿಯ ಉಪ್ಪಾರ ಸಮೂದಾಯ ಭವನದಲ್ಲಿ ನಡೆದ ಉಪ್ಪಾರ ಜನಾಂಗದ ಸಭೆಯಲ್ಲಿ ಮಾತನಾಡಿದ ಅವರು ಗ್ಯಾಸ್, ಪೆಟ್ರೋಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸಿ ಬಡವರಿಗೆ ಅನುಕೂಲ ಮಾಡಿ ಕೊಡಬಹುದಿತ್ತು. ಆದರೆ ಎಲ್ಲಾ ಅಗತ್ಯ ವಸ್ತುಗಳು ಗಗನಕ್ಕೇರುತ್ತಿವೆ. ಬಡವರ, ಶ್ರೀಸಾಮಾನ್ಯನ ಮೇಲೆ ಕಾಳಜಿಯಿದ್ದರೆ ಅಗತ್ಯ ವಸ್ತುಗಳ ಬೆಲೆ ಇಳಿಸುತ್ತಿದ್ದರು. ರೈತರ ಸಾಲ ಮನ್ನಾ ಮಾಡುತ್ತಿದ್ದರು ಅವರಿಗೆ ಅಂಬಾನಿ, ಅಧಾನಿ ಉದ್ಯಮಿಗಳ ಅಭಿವೃದ್ಧಿಯೇ ಮುಖ್ಯ ಇಂತವರಿಗೆ ಮತ ನೀಡುವಿರಾ ಎಂದು ಪ್ರಶ್ನಿಸಿದರು.

ಗಡಿಯಲ್ಲಿ ದಿನನಿತ್ಯ ಒಂದಲ್ಲ ಒಂದು ಕಾರ್ಯಚರಣೆ ನಡೆಯುತ್ತಲಿರುತ್ತದೆ.ಅದನ್ನು ನಮ್ಮ ಸೇನೆ ನಿರ್ವಹಿಸುತ್ತದೆ.ಅದನ್ನೆ ನಮ್ಮ ಸಾಧನೆ ಎಂದು ಚುನಾವಣಾ ಪ್ರಚಾರಕ್ಕೆ ಬಳಸಿ ಕೊಳ್ಳುತ್ತಿರುವುದು ಎಷ್ಟು ಸರಿ ಎಂದರು.

ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಶಾಸಕ ಆರ್.ನರೇಂದ್ರ, ಜಿ.ಪಂ ಅಧ್ಯಕ್ಷೆ ಶಿವಮ್ಮ, ತಾ.ಪಂ.ಅಧ್ಯಕ್ಷ ರಾಜೇಂದ್ರ, ಗ್ರಾ.ಪಂ ಅಧ್ಯಕ್ಷೆ ಯಶೋಧಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ