ಬೆಂಗಳೂರು, ಏ.2- ನ್ಯಾಯಾಲಯದಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯ, ಭಾಷಾ ಸಮಾನತೆ ಎತ್ತಿ ಹಿಡಿಯಲು ಸಮಾನ 343, 351 ತಿದ್ದುಪಡಿಗೆ ಒತ್ತಾಯ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕನ್ನಡ ಭಾಷೆ ಸೇರಿದಂತೆ ಕನ್ನಡದ ಪರವಾಗಿ ಧ್ವನಿ ಎತ್ತುವ ಸಂಸದರನ್ನು ಆಯ್ಕೆ ಮಾಡಬೇಕೆಂದು ಕರ್ನಾಟಕ ವಿಕಾಸ ರಂಗ ಆಗ್ರಹಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ವ.ಚ.ಚೆನ್ನೇಗೌಡ ಅವರು, ಬ್ಯಾಂಕಿಂಗ್ ನೇಮಕಾತಿ, ಗ್ರಾಮೀಣ ಬ್ಯಾಂಕ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಮಾರಕವಾಗಿರುವ ಪ್ರಸ್ತುತ ತಿದ್ದುಪಡಿಯನ್ನು ಕೈ ಬಿಟ್ಟು 2014ರ ಮುಂಚಿನ ನಿಯಮವನ್ನು ಜಾರಿ ಮಾಡಬೇಕು.ನಮ್ಮ ಮೆಟ್ರೊದಲ್ಲಿ ಹಿಂದಿ ನುಸುಳದಂತೆ ನೋಡಿಕೊಳ್ಳಬೇಕು.ಕನ್ನಡಕ್ಕೆ ಭಾರತ ಒಕ್ಕೂಟ ಆಡಳಿತ ಭಾಷೆಯ ಸ್ಥಾನಮಾನ ಕೊಡಿಸಬೇಕು.ಕಳಸಾಬಂಡೂರಿ, ಕಾವೇರಿ, ಮೇಕೆದಾಟು ಮೊದಲಾದ ಬಿಕ್ಕಟಿನ ಸಮಯದಲ್ಲಿ ಪಕ್ಷದ ಬೇಧ ಮರೆತು ಹೋರಾಟ ಮಾಡಬೇಕು.ನೀಟ್ ಉನ್ನತ ವೈದ್ಯಕೀಯ ಪ್ರವೇಶದಂತಹ ಕೇಂದ್ರಿಕೃತ ವ್ಯವಸ್ಥೆಯಲ್ಲಿ ನಾಡ ಮಕ್ಕಳಿಗೆ ಹಕ್ಕು ಸಿಗಬೇಕು. ಇಂತಹ ಸೌಲಭ್ಯಗಳನ್ನು ಕಲ್ಪಿಸುವ ಕಾಳಜಿಯುಳ್ಳ ಸಂಸದರನ್ನು ಆಯ್ಕೆ ಮಾಡಬೇಕೆಂದು ಅವರು ಹಾಗೂ ಗೌರವ ಸಲಹೆಗಾರರಾದ ರಾ.ನಂ.ಚಂದ್ರಶೇಖರ್ ಒತ್ತಾಯಿಸಿದ್ದಾರೆ.