ನಾಳೆ ಜಲಮಂಡಳಿಯಿಂದ ನೀರಿನ ಅದಾಲತ್

ಬೆಂಗಳೂರು, ಏ.1- ಬೆಂಗಳೂರು ಜಲಮಂಡಲಿಯ ಸಕಾನಿಅ (ಪಶ್ಚಿಮ-1), ಸಕಾನಿಅ (ಆಗ್ನೇಯ-1) ಮತ್ತು ಸಕಾನಿಅ (ನೈರುತ್ಯ-1) ಉಪವಿಭಾಗಗಳಲ್ಲಿ ನಾಳೆ ಬೆಳಗ್ಗೆ 9.30ರಿಂದ 11 ಗಂಟೆವರೆಗೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತ್ತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್ ನಡೆಸಲಾಗುತ್ತದೆ.

ಸಕಾನಿಏ (ಪಶ್ಚಿಮ-1) ಉಪವಿಭಾಗದ ವ್ಯಾಪ್ತಿಯ ಮಾಗಡಿ ರಸ್ತೆ 12, ಹೊಸಹಳ್ಳಿ ಪಂಪ್‍ಹೌಸ್, ಮೈಸೂರು ರಸ್ತೆ, ಸೇವಾ ಠಾಣೆ ವ್ಯಾಪ್ತಿಯ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೆಲಮಹಡಿ, ಅರ್ಕಾವತಿ ಭವನ, 5ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಆರ್.ಪಿ.ಸಿ ಲೇಔಟ್, ವಿಜಯನಗರ 2ನೇ ಹಂತ ಇಲ್ಲಿನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಪಶ್ಚಿಮ-1) ಕಚೇರಿಯಲ್ಲಿ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಯನಿರ್ವಾಹಕ ಅಭಿಯಂತರರು (ಪಶ್ಚಿಮ): 22349171. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಪಶ್ಚಿಮ-1) ಉಪವಿಭಾಗ: 23500013.

ಸಕಾನಿಅ (ಆಗ್ನೇಯ-1) ಉಪವಿಭಾಗದ ವ್ಯಾಪ್ತಿಯ ಹಲಸೂರು, ದೊಮ್ಮಲೂರು, ಸಿ.ಎಲ್.ಆರ್ ಜಾನ್ಸನ್ ಮಾರ್ಕೆಟ್ ಸೇವಾ ಠಾಣೆ ವ್ಯಾಪ್ತಿಯ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಸ್ವಾಮಿ ವಿವೇಕಾನಂದ ರಸ್ತೆ, ಲಿಡೋ ಮಹಲ್ ಎದುರು, ಇಲ್ಲಿನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಆಗ್ನೇಯ-1) ಕಚೇರಿಯಲ್ಲಿ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಯನಿರ್ವಾಹಕ ಅಭಿಯಂತರರು (ಆಗ್ನೇಯ-1): 22945169. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಆಗ್ನೇಯ-1): 22945169.

ಸಕಾನಿಅ (ನೈರುತ್ಯ-1) ಉಪವಿಭಾಗದ ವಿ.ವಿ.ಪುರಂ, ಸುಧಾಮನಗರ-2, ಕೆಂಪೇಗೌಡನಗರ, ಜಗ ಜೀವನ್‍ರಾಮ್ ನಗರ, ಚಾಮರಾಜ ಪೇಟೆ ಸೇವಾ ಠಾಣೆ ವ್ಯಾಪ್ತಿಯ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ದ್ವಾರಕನಾಥ ರಸ್ತೆ, ವಿ.ವಿ.ಪುರಂ ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ನೈರುತ್ಯ-1) ಕಚೇರಿಯಲ್ಲಿ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಯನಿರ್ವಾಹಕ ಅಭಿಯಂತರರು (ನೈರುತ್ಯ): 22945196. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ನೈರುತ್ಯ-1) ಉಪವಿಭಾಗ: 22425193.

ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ ದಿನದ 24 ಗಂಟೆ ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ:22238888, ಸಹಾಯವಾಣಿ 1916 ಹಾಗೂ ವಾಟ್ಸ್‍ಆಪ್ ಸಂಖ್ಯೆ: 8762228888 ಗೆ ಸಂಪರ್ಕಿಸಬಹುದಾಗಿದೆ.

ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯ ಬಳಸಿಕೊಳ್ಳ ಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ