ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅಮೇಠಿ ಜತೆಗೆ ಕೇರಳದ ವಯಾನಾಡ್ನಿಂದಲೂ ಸ್ಪರ್ಧಿಸುತ್ತಾರೆ ಎಂದು ಘೋಷಣೆಯಾಗುತ್ತಿದ್ದಂತೆಯೇ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ಈಗ ವಯನಾಡ್ ನಲ್ಲಿ ರಾಹುಲ್ ಗಾಂಧಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.
ವಯಾನಾಡ್ನಲ್ಲಿ ರಾಹುಲ್ಗೆ ಪ್ರತಿಸ್ಪರ್ಧಿಯಾಗಿ ಎನ್ಡಿಎ, ಭಾರತ್ ಧರ್ಮ ಜನ ಸೇನಾದ ಅಧ್ಯಕ್ಷ ತುಷಾರ್ ವೆಳ್ಳಪಲ್ಲಿಯವರನ್ನು ಕಣಕ್ಕೆ ಇಳಿಸಿದೆ.
ತುಷಾರ್ ವೆಳ್ಳಪಲ್ಲಿ ಅವರನ್ನು ವಯಾನಾಡ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಹೆಮ್ಮೆಯೆನಿಸುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ತುಷಾರ್ ಅವರು ಕ್ರಿಯಾತ್ಮಕ ಯುವ ನಾಯಕ. ಬಿಜೆಪಿಯ ಮೊದಲ ಆದ್ಯತೆಯಾಗಿರುವ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದೆಡೆಗಿನ ಬದ್ಧತೆಯನ್ನು ಅವರು ಪ್ರತಿಬಿಂಬಿಸುತ್ತಾರೆ. ಅವರೊಂದಿಗೆ ಜತೆಯಾಗಿ ಎನ್ಡಿಎ ಕೇರಳದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಟ್ವೀಟ್ ಮಾಡಿದ್ದಾರೆ.
Thushar vellappally bjp wayanad