ಯುವ ಆಲ್ರೌಂಡರ್ ಕೃನಾಲ್ ಪಾಂಡ್ಯ ಎಲ್ಲರ ಹೃದಯ ಗೆದಿದ್ದಾರೆ. ಪಂಜಾಬ್ ತಂಡದ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಅವರನ್ನ ಮಂಕಡ್ ಶೈಲಿಯಲ್ಲಿ ಔಟ್ ಮಾಡಲು ಅವಕಾಶ ಸಿಕ್ಕರೂ ಅದನ್ನು ಬಳಸದೇ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ.
ಹೌದು ಮೊಹಾಲಿ ಅಂಗಳದಲ್ಲಿ ನಡೆದ ಕಿಂಗ್ಸ್ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ಜೈಪುರದ ಪಂದ್ಯದಲ್ಲಿ ರಾಜಸ್ತಾನ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅವರನ್ನ ಪಂಜಾಬ್ ಕ್ಯಾಪ್ಟನ್ ಆರ್.ಅಶ್ವಿನ್ ಮಂಕಡ್ ಶೈಲಿಯಲ್ಲಿ ಔಟ್ ಮಾಡಿದ್ದು ಭಾರೀ ವಿಶ್ವ ಕ್ರಿಕೆಟ್ನಲ್ಲಿ ವಿವಾದವಾಗಿತ್ತು.
ಇದೀಗ ಇಂಥದ್ದೆ ಘಟನೆ ಮತ್ತೆ ನಡೆಯಬೇಕಿತ್ತು. ಅದರೆ ಕೃನಾಲ್ ಇದಕ್ಕೆ ಅವಕಾಶಕೊಡಲಿಲ್ಲ. ಕೃನಾಲ್ ಪಾಂಡ್ಯ ಅವರ 10ನೇ ಓವರ್ನಲ್ಲಿ
ಪಂಜಾಬ್ ತಂಡದ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ನಾನ್ಸ್ಟ್ರೈಕ್ನಲ್ಲಿದ್ದರು. ಕೃನಾಲ್ ಚೆಂಡು ಎಸೆಯುವ ಮುನ್ನವೇ ಮಯಾಂಕ್ ಕ್ರೀಸ್ ಬಿಟ್ಟಿದ್ದರು.
ತಕ್ಷಣ ಬೌಲಿಂಗ್ ಹಾಕುವುದನ್ನ ನಿಲ್ಲಿಸಿದ ಕೃನಾಲ್ ವಿಕೆಟ್ಗೆ ಚೆಂಡನ್ನ ಹೊಡೆಯುವ ರೀತಿಯಲ್ಲಿ ಎಚ್ಚರಿಕೆಕೊಟ್ಟರು. ಅಷ್ಟರಲ್ಲೆ ಆಗಲೇ ಮಯಾಂಕ್ ಕ್ರೀಸ್ಗೆ ಮರಳಿದರು. ಮೈದಾನದಲ್ಲಿದ್ದ ಆಟಗಾರರೆಲ್ಲ ಹಳೆಯ ಘಟನೆ ನೆನೆದು ನಗು ಚೆಲ್ಲಿದರು.