ಸೂಪರ್ ಓವರ್‍ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಮತ್ತೊಂದು ರೋಚಕ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೂಪರ್ ಓವರ್‍ನಲ್ಲಿ ಗೆಲುವು ಪಡೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ ನಾಯಕ ದಿನೇಶ್ ಕಾರ್ತಿಕ್ (50), ಆಲ್‍ರೌಂಡರ್ ಆಂಡ್ರೆ ರಸೆಲ್ (62) ಅವರ ತಲಾ ಅರ್ಧ ಶತಕದ ನೆರವಿನಿಂದ ನಿಗದಿತ ಓವರ್‍ನಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.

185 ರನ್‍ಗಳ ಬೃಹತ್ ಸವಾಲು ಬೆನ್ನತ್ತಿದ ಡೆಲ್ಲಿ ತಂಡ ಓಪನರ್ ಶಿಖರ್ ಧವನ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಮರಿ ಸಚಿನ್ ಪೃಥ್ವಿ ಶಾ ಮತ್ತು ನಾಯಕ ಶ್ರೇಯಸ್ ಅಯ್ಯರ್ ಎರಡನೇ ವಿಕೆಟ್‍ಗೆ 111 ರನ್ ಸೇರಿಸಿ ಪಂದ್ಯದ ಗತಿಯನ್ನೆ ಬದಲಿಸಿದ್ರು. ಆದರೆ ನಂತರ ಬಂದ ರಿಷಬ್ ಪಂತ್ (11), ಕಾಲಿನ್ ಇನ್‍ಗ್ರಾಂ(10), ಹನುಮ ವಿಹಾರಿ 2 ರನ್ ಗಳಿಸಿದ್ರು. ಶತಕದ ಸನಿಹದಲ್ಲಿದ್ದ ಮರಿ ಸಚಿನ್ ಪೃಥ್ವಿ 99 ರನ್‍ಗಳಿಸಿದ್ದಾಗ ವೇಗಿ ಫಗ್ರ್ಯೂಸನ್‍ಗೆ ಬಲಿಯಾಗಿ ಶತಕದಿಂದ ವಂಚಿತರಾದರು. ಕೊನೆಯ ಎಸೆತದಲ್ಲಿ ಇನ್‍ಗ್ರಾಂ ರನೌಟ್ ಬಲಗೆ ಬಿದ್ದಿದ್ದರಿಂದ ಡೆಲ್ಲಿ ತಂಡ ಪಂದ್ಯವನ್ನ ಟೈ ಮಾಡಿಕೊಂಡಿತು.

ಸೂಪರ್ ಓವರ್‍ನಲ್ಲಿ ಡೆಲ್ಲಿ ಜಯಭೇರಿ
ನಿರ್ಣಾಯಕ ಸೂಪರ್ ಓವರ್‍ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 6 ಎಸೆತದಲ್ಲಿ 10 ರನ್ ಕಲೆ ಹಾಕಿತು. 11 ರನ್‍ಗಳ ಗುರಿ ಬೆನ್ನತಿದ ಕೋಲ್ಕತ್ತಾ 7 ರನ್ ಗಳಿಸಿ ಸೋಲು ಕಂಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ