ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್ ಅವರಿಗೆ ಚುನಾವಣಾ ಆಯೋಗ ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ನೀಡಿದೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸುಮಲತಾ ಅಂಬರೀಷ್ ಅವರ ಚುನಾವಣಾ ಏಜೆಂಟ್ ಮದನ್ ಸಮ್ಮುಖದಲ್ಲಿ ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ಅಂತಿಮಗೊಳಿಸಲಾಗಿದೆ. ಈ ಮೊದಲು ಲಕ್ಕಿ ಡ್ರಾದಲ್ಲಿ ಸುಮಲತಾ ಅವರು ಬಯಸಿದ್ದ ರಣ ಕಹಳೆ ಊದುವ ರೈತ, ತೆಂಗಿನ ತೋಟ, ಕಬ್ಬಿನ ಗದ್ದೆ ಮುಂದೆ ರೈತ ಚಿಹ್ನೆಗಳು ಬೇರೆಯವರ ಪಾಲಾಗಿದ್ದವು.
ಆ ನಂತರ ಚುನಾವಣಾ ಆಯೋಗ ತಳ್ಳುವ ಗಾಡಿ ಚಿಹ್ನೆಯನ್ನು ಸುಮಲತಾ ಅವರಿಗೆ ನೀಡಿತ್ತು. ಚಿಹ್ನೆ ಬದಲಾವಣೆ ಸಂಬಂಧ ಸುಮಲತಾ ಅವರು ಆಯೋಗದೊಂದಿಗೆ ಮಾತಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ಸಭೆ ನಡೆಸಿ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.
sumalatha ambareesh gets desired symbol in lok sabha elections