ಲಖನೌ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದ ನಿಶಾದ್ ಪಾರ್ಟಿ ಈಗ ಆ ಮೈತ್ರಿಯಿಂದ ಹೊರಬಿದ್ದಿದೆ.
ನಿಶಾದ್ ಪಾರ್ಟಿ ಮುಖ್ಯಸ್ಥ ಸಂಜಯ್ ನಿಶಾದ್ ಅವರು ಮಹಾರಾಜ್ಗಂಜ್ನಿಂದ ಆ ಪಕ್ಷದ ಚಿಹ್ನೆಯನ್ನು ಮುಂದಿಟ್ಟು ಸ್ಪರ್ಧಿಸುವ ವಿಚಾರದಲ್ಲಿ ಮೈತ್ರಿ ಪಕ್ಷಗಳೊಂದಿಗೆ ಒಮ್ಮತದ ಅಭಿಪ್ರಾಯ ಸಾಧ್ಯವಾಗದ ಕಾರಣ ಹೊರಬಿದ್ದಿರುವುದಾಗಿ ಪಕ್ಷ ತಿಳಿಸಿದೆ.
ನಿಶಾದ್ ಪಕ್ಷದ ಅಧ್ಯಕ್ಷ ಸಂಜಯ್ ನಿಶಾದ್ ಹಾಗೂ ಅವರ ಪುತ್ರ, ಗೋರಖ್ ಪುರ ಹಾಲಿ ಸಂಸದ ಪ್ರವೀಣ್ ನಿಶಾದ್ ಇಬ್ಬರೂ ಶುಕ್ರವಾರ ಯೋಗಿ ಆದಿತ್ಯನಾಥ್ ಜತೆ ಮಾತುಕತೆ ನಡೆಸಿದ್ದು ಬಿಜೆಪಿ ಸೇರುವ ಎಲ್ಲ ಸಾಧ್ಯತೆಗಳೂ ಇವೆ ಎನ್ನಲಾಗಿದೆ.
ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ನಿಶಾದ್ ಪಾರ್ಟಿಯೊಂದಿಗೆ ಸೇರಿ ಗೋರಖ್ಪುರದಲ್ಲಿ ಬಿಜೆಪಿಯನ್ನು ಸೋಲಿಸಿ ಆಘಾತ ನೀಡಿತ್ತು.
ಪ್ರವೀಣ್ ನಿಶಾದ್ಗೆ ಪಕ್ಷದಿಂದ ಟಿಕೆಟ್ ನೀಡಿ ಅವರನ್ನು ಗೆಲ್ಲಿಸಿತ್ತು. ಈ ಮೂಲಕ ಮೂರು ವರ್ಷಗಳಿಂದ ಅಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಸೋಲುಂಡಿತ್ತು.
Days after joining SP-BSP alliance, Nishad Party walks out