![apolo](http://kannada.vartamitra.com/wp-content/uploads/2018/11/apolo-593x381.jpg)
ಬೆಂಗಳೂರು, ಮಾ.29- ಅಪಲೋ ಮೆಡ್ಸ್ಕಿಲ್ , ಅಪಲೋ ಹಾಸ್ಪಿಟಲ್ ಗ್ರೂಪ್ನ ಸ್ಕಿಲ್ಲಿಂಗ್ ಆರ್ಮ್ ಆಗಿದ್ದು, ಭಾರತದ 24 ರಾಜ್ಯಗಳಲ್ಲಿ 42 ತರಬೇತಿ ಕೇಂದ್ರಗಳ ಮೂಲಕ ಉದ್ಯಮ ಸಂಬಂಧಿಕತ ಕೌಶಲ್ಯಗಳೊಂದಿಗೆ ತರಬೇತಿ ನೀಡಲಿದೆ.
ಪ್ರತಿ ಯುವಕರಿಗೂ ಉದ್ಯೋಗಿಯಾಗಲು ಅನುವು ಮಾಡಿಕೊಡುವ ಕೌಶಲ್ಯದೊಂದಿಗೆ ತರಬೇತಿ ನೀಡಲಾಗುತ್ತಿದ್ದು, ಗುಣಮಟ್ಟದ ಪಠ್ಯಕ್ರಮ, ಶಿಕ್ಷಣ, ವ್ಯಕ್ತಿತ್ವ ಅಭಿವೃದ್ಧಿ, ಇಂಗ್ಲಿಷ್ ಮಾತನಾಡುವ ಕೌಶಲ್ಯ, ಕಂಪ್ಯೂಟರ್ ಕಾರ್ಯಾಚರಣೆ, ಉದ್ಯೋಗವಕಾಶ ಒದಗಿಸುತ್ತಿದೆ.
ಉಚಿತ ತರಬೇತಿ, ಹಾಸ್ಟೇಲ್ ವ್ಯವಸ್ಥೆ ಹಾಗೂ ಆಹಾರ ವ್ಯವಸ್ಥೆಯನ್ನು ಕಲ್ಪಿಸುವ ಸ್ಕಿಲ್ಲಿಂಗ್ ಆರ್ಮ್ನಲ್ಲಿ ಬ್ಲೆಡ್ಬ್ಯಾಂಕ್ ಟೆಕ್ನಿಷಿಯಲ್, ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯಲ್, ಮೆಡಿಕಲ್ ಲ್ಯಾಬ್ ಟೆಕ್ನಿಷಿಯಲ್, ಆಪರೇಷನ್ ಥಿಯೇಟರ್ ಟೆಕ್ನಿಷಿಯಲ್ ಕೋರ್ಸ್ಗನ್ನು ನಡೆಸುತ್ತಿದ್ದು, 18ರಿಂದ 35 ವರ್ಷದೊಳಗಿನ ಪಿಯುಸಿ ಪೂರ್ಣಗೊಳಿಸಿದವರು ಸೇರಲು ಅರ್ಹರಾಗಿದ್ದಾರೆ.
ಆಸಕ್ತರು ಅಪಲೋ ಮೆಡ್ಸ್ಕಿಲ್ ಲಿಮಿಟೆಡ್, ನಂ.174/1 ಎಂಇಯು ಸ್ಕೌಯರ್ ಬಿಲ್ಡಿಂಗ್, ಕೆಎಫ್ಸಿ ಮತ್ತು ನಾಗಾರಾರ್ಜುನ ರೆಸ್ಟೋರೆಂಟ್ನ ಮೇಲೆ, ಬನ್ನೇರುಘಟ್ಟ ಮುಖ್ಯರಸ್ತೆ, ಜೆ.ಪಿ.ನಗರ ಮೂರನೇ ಹಂತ, ಬೆಂಗಳೂರು-560076 ಖುದ್ದಾಗಿ ಭೇಟಿ ನೀಡಬಹುದು ಅಥವಾ ದೂ.ಸಂ. 9121018615, ರಂಗನಾಥ್- 8861205591, ನಾಗರಾಜ್- 9590864652 ಸಂಪರ್ಕಿಸುವಂತೆ ಕೋರಲಾಗಿದೆ.