ಐಪಿಎಲ್ ಟೂರ್ನಿಯಲ್ಲಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆತಿಥೇಯ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದು ನಡೆಯುವ ಹೈವೋಲ್ಟೇಜ್ ಕದನ ನಡೆಯಸಲಿದೆ.
ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿದ ಉಭಯ ತಂಡಗಳು
ಟೂರ್ನಿಯ ಮೊದಲ ಪಂದ್ಯದಲ್ಲಿ ಆರ್ಸಿಬಿ ಚೆನ್ನೈ ವಿರುದ್ಧ ಹೀನಾಯವಾಗಿ ಸೋತಿತ್ತು. ಇದಿಗ ತವರಿನಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನ ಎದುರಿಸುತ್ತಿದ್ದು ತವರಿನ ಅಭಿಮಾನಿಗಳ ಎದುರು ಗೆಲ್ಲಲ್ಲೇ ಬೇಕಾದ ಒತ್ತಡವನ್ನ ಎದುರಿಸುತ್ತಿದೆ. ಇತ್ತ ಮುಂಬೈ ಇಂಡಿಯನ್ಸ್ ಕೂಡ ಮೊದಲ ಪಂದ್ಯದಲ್ಲಿ ಸೋತು ಗೆಲುವಿನ ಖಾತೆ ತೆರೆಯಲು ಇನ್ನಿಲ್ಲದ ಹೋರಾಟವನ್ನ ಮಾಡಲಿದೆ.
ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ ಚಿನ್ನಸ್ವಾಮಿ ಅಂಗಳ
ದೇಶಾದ್ಯಂತೆ ಚುನಾವಣೆಯ ಮಧ್ಯಯೂ ಐಪಿಎಲ್ ಜ್ವರ ಜೋರಾಗಿದೆ. ಇಂದು ನಡೆಯುವ ಹೈವೊಲ್ಟೇಜ್ ಕದನಕ್ಕೆ ಚಿನ್ನಸ್ವಾಮಿ ಅಂಗಳ ಮಧುವಣಗಿತ್ತಯಂತೆ ಸಿಂಗಾರಗೊಂಡಿದೆ. ಪಂದ್ಯ ವೀಕ್ಷಿಸಲು ಬರುವ ಕ್ರಿಕೆಟ್ ಅಭಿಮಾಣಿಗಳಿಗೆ ವಿಶೇಷವಾಗಿ ಎಲ್ಇಡಿ ವ್ಯವ್ಯಸ್ಥೆಯನ್ನ ಮಾಡಲಾಗಿದೆ.
ಇಂದು ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿರುವ ಪಂದ್ಯ ವಿರಾಟ್ ಕೊಹ್ಲಿ ಪಡೆಗೆ ಪ್ರತಿಷ್ಠೆಯ ಪಂದ್ಯವಾಗಿದೆ. ಯಾಕಂದ್ರೆ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುವ ಐಪಿಎಲ್ ಈ ಬಾರಿ ಹಲವಾರು ವಿಶೇಷತೆಗಳಿಂದ ಕೂಡಿದೆ. ರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಕೆಎಸ್ಸಿಎ ಕರ್ನಾಟಕದ 60 ವೀರ ಯೋಧರನ್ನ ಪಂದ್ಯ ವೀಕ್ಷಣೆಗೆ ಆಹ್ವಾನಿಸಿದೆ. ಈ ಬಾರಿ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುವ 7 ಪಂದ್ಯಗಳನ್ನ ಈ ಯೋಧರು ಮೈದಾನಕ್ಕೆ ಬಂದು ವೀಕ್ಷಿಸುವಂತೆ ವ್ಯವಸ್ಥೆ ಮಾಡಿದೆ.
ಆರ್ಸಿಬಿ ಪಂದ್ಯಗಳನ್ನ ವೀಕ್ಷಿಸಲಿವೆ ಶ್ವಾನಗಳು
ಈ ಬಾರಿ ಮತ್ತೊಂದು ವಿಶೇಷತೆ ಅಂದ್ರೆ ಕ್ರಿಕೆಟ್ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಬರುವಾಗ ತಮ್ಮ ಶ್ವಾನಗಳನ್ನ ಕರೆದುಕೊಂಡು ಬರಬಹುದಾಗಿದ್ದು ಇದಕ್ಕಾಗಿ ಡಾಗ್ ಔಟ್ವೊಂದನ್ನ ನಿರ್ಮಿಸಲಾಗಿದೆ. ಸಾಕು ನಾಯಿ ಪ್ರಿಯರಿಗೆ ಆರ್ಸಿಬಿ ತಂಡ ಒಂದು ಗುಡ್ ನ್ಯೂಸ್ ನೀಡಿದ್ದು, ಪಂದ್ಯ ವೀಕ್ಷಣೆಗೆ ನಾಯಿಗಳಿಗೂ ಅವಕಾಶ ನೀಡಲು ಮುಂದಾಗಿದೆ.
ಐಪಿಎಲ್ ಪಂದ್ಯಗಳನ್ನ ನೋಡಲು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿಗೆ ತಮ್ಮ ಪ್ರೀತಿಯ ಶ್ವಾನಗಳನ್ನ ಕೂಡ ಕರೆತರಲು ಅವಕಾಶ ನೀಡಲು ಬೆಂಗಳೂರು ತಂಡ ಮುಂದಾಗಿದೆ. ಇದಕ್ಕಾಗಿಯೇ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ವಾನಗಳನ್ನ ಕರೆತರುವವರಿಗೆ ಪ್ರತ್ಯೇಕ ವ್ಯವಸ್ಥೆ ಡಾಗ್ಔಟ್ ಮಾಡಲು ಮುಂದಾಗಿದೆ.
ಶ್ವಾನ ಪ್ರಿಯರು ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬರುವಾಗ ತಮ್ಮ ಪ್ರೀತಿಯ ನಾಯಿಗಳನ್ನ ಮನೆಯಲ್ಲೇ ಬಿಟ್ಟು ಬರಬೇಕಿತ್ತು. ಕೆಲವೊಮ್ಮೆ ಅವುಗಳನ್ನ ನೋಡಿಕೊಳ್ಳಲು ಯಾರೂ ಇಲ್ಲದ ಕಾರಣದಿಂದ ಕ್ರೀಡಾಂಗಣಕ್ಕೆ ಬರುತ್ತಿರಲಿಲ್ಲ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ಧಾರದಿಂದ ಶ್ವಾನ ಪ್ರಿಯರು ಫುಲ್ ಖುಷಿಯಾಗಿದ್ದಾರೆ. ತಮ್ಮಿಷ್ಟದ ಸಾಕು ನಾಯಿಗಳೊಂದಿಗೆ ಆರ್ಸಿಬಿ ಪಂದ್ಯ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ಈ ಬಗ್ಗೆ ಆರ್ಸಿಬಿ ತಂಡ ಟ್ವೀಟ್ ಮಾಡಿದ್ದು, ಪಂದ್ಯ ವೀಕ್ಷಣೆಗೆ ನಿಮ್ಮ ಮುದ್ದಿನ ನಾಯಿಗಳನ್ನು ಕರೆತರಲು ಇರುವ ಅವಕಾಶಗಳ ಬಗ್ಗೆ ಶೀಘ್ರದಲ್ಲಿಯೇ ತಿಳಿಸೋದಾಗಿ ಹೇಳಿದೆ.
ಒಟ್ಟಾರೆ ಈ ಬಾರಿ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಪಂದ್ಯದ ರೋಚಕತೆಯ ನೀಡುವ ಜೊತೆಗೆ ಹಲವಾರು ವಿಶೇಷತೆಗಳೊಂದಿಗೆ ಗಮನ ಸೆಳೆಯುತ್ತಿದೆ.