ಐಪಿಎಲ್ನಲ್ಲಿ ಶುರುವಾಗಿದೆ ಆಟಗಾರರ ನಡುವೆ ಟಾಕ್ ಫೈಟ್: ವಾಟ್ಸನ್ ಜೊತೆ ಇಶಾಂತ್, ರಬಡ ಮಾತಿನ ಚಕಮಕಿ

 ಕ್ರಿಕೆಟ್ ಎಂಬ ಜೆಂಟಲ್ಮ್ಯಾನ್ ಗೇಮ್ನಲ್ಲಿ ಆಟಗಾರರ ನಡುವೆ ಮಾತಿನ ಚಕಮಕಿ ಎಂಬುವುದು ಸರ್ವೆ ಸಾಮಾನ್ಯ. ಎದುರಾಳಿಗಳನ್ನ ಕಟ್ಟಿಹಾಕೋಕ್ಕೆ ಸ್ಲಡ್ಜಿಂಗ್ ಅಸ್ತ್ರವನ್ನ ಪ್ರಯೋಗಿಸೋದು ಕಾಮನ್ ಆಗ್ಬಿಟ್ಟಿದೆ. ಇದಕ್ಕೆ ಐಪಿಎಲ್ ಕೂಡ ಹೊರತಾಗಿಲ್ಲ.

ಮೊನ್ನೆ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ – ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಸಾಕ್ಷಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಶೇನ್ ವಾಟ್ಸನ್, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿಗಳಾದ ಇಶಾಂತ್ ಶರ್ಮಾ ಹಾಗೂ ಕಗಿಸೋ ರಬಡ ಜೊತೆ ಮಾತಿನ ಚಕಮಕಿ ನಡೆದಿದೆ.

ಇಶಾಂತ್ ಸಂಭ್ರಮಾಚರಣೆಗೆ ವಾಟ್ಸನ್ ಆಕ್ರೋಶ
3ನೇ ಓವರ್ ನಲ್ಲಿ ದಾಳಿಗಿಳಿದ ಡೆಲ್ಲಿ ಪೇಸರ್ ಇಶಾಂತ್ ಶರ್ಮಾ ನಾಲ್ಕನೆ ಎಸೆತದಲ್ಲಿ ಚೆನ್ನೈ ತಂಡದ ಬ್ಯಾಟ್ಸ್ಮನ್ ಅಂಬಟಿ ರಾಯ್ಡುಗೆ ಪೆವಿಲಿಯನ್ ದಾರಿ ತೋರಿಸಿದ್ರು. ಈ ವೇಳೆ ಇಶಾಂತ್ ವಾಟ್ಸನ್ ಮುಖ ನೋಡಿ ಸಂಭ್ರಮಿಸಿದ್ರು. ಇದರಿಂದ ಆಲ್ರೌಂಡರ್ ಶೇನ್ ವಾಟ್ಸಾನ್ ಕೋಪಗೊಂಡರು. ಇದರಿಂದ ಕೆರೆಳಿದ ಇಶಾಂತ್ ಶರ್ಮಾ ವಾಟ್ಸನ್ ಬಳಿ ಹೋಗಿ ಮಾತಿನ ಚಕಮಕಿ ನಡೆಸಿದ್ರು. ವ್ಯಾಟ್ಸನ್ ನಗುತ್ತಲ್ಲೆ ಮಾತನಾಡಿದ್ರು.

ಪರಿಸ್ಥಿತಿ ಅರಿತ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಮಧ್ಯಪ್ರವೇಶಿಸಿ ಇಶಾಂತ್ ಶರ್ಮಾಗೆ ಸಮಾಧಾನ ಪಡಿಸಿ ಕಳುಹಿಸಿದ್ರು. ಆದ್ರೆ ಇಶಾಂತ್ ಶರ್ಮಾ ಮಾತ್ರ ನಿಂದಿಸುತ್ತಲೇ ಹೊರ ನಡೆದ್ರು.

ನಂತರ 4ನೇ ಓವರ್ ಬೌಲಿಂಗ್ ಮಾಡಲು ಬಂದ ಕಗಿಸೋ ರಬಡಾ ಅವರ ಎಸೆದ 4 ಎಸೆತಗಳನ್ನು ವಾಟ್ಸನ್ ಡಾಟ್ ಮಾಡಿದ್ರು. ಈ ವೇಳೆ ಪಿಚ್ನಲ್ಲಿ ಓಡುತ್ತಿದ್ದಾನೆಂದು ಡೆಲ್ಲಿ ವೇಗಿ ಪೇಸರ್ ರಬಡ ಆರೋಪಿಸಿದ್ರು. ಅಂಪೈಯರ್ ಮರಿಯಾಸ್ ಎರಸ್ಮಸ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ರು.
ರಬಡ ಆರೋಪಕ್ಕೆ ವ್ಯಾಟ್ಸನ್ ಸುಮ್ಮನೆ ಓಡಾಡ್ತಿದ್ದೇನೆಂದು ಉತ್ತರಿಸಿದಾಗ ರಬಡ ಚಪ್ಪಾಳೆ ತಟ್ಟುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ರು..

ಬ್ಯಾಟ್ನಲ್ಲೆ ಉತ್ತರ ಕೊಟ್ಟ ಶೇನ್ ವ್ಯಾಟ್ಸನ್
ತಮ್ಮನ್ನ ಕೆರೆಳಿಸಿದ ಪೇಸರ್ಸ್ಗಳಾದ ಇಶಾಂತ್ ಶರ್ಮಾ ಮತ್ತು ರಬಾಡ ಮೇಲಿನ ಸಿಟ್ಟನ್ನ ವಾಟ್ಸನ್ ಬ್ಯಾಟ್ ನಲ್ಲೆ ಸೇಡು ತೀರಿಸಿಕೊಂಡ್ರು.

ಮೈದಾನದ ಮೂಲೆಗೂ ವಾಟ್ಸನ್ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದ್ರು. 44 ರನ್ಗಳಿಸಿ ಅರ್ಧ ಶತದತ್ತ ಮುನ್ನುಗುತ್ತಿದ್ದಾಗ ರಿಷಬ್ ಪಂತ್ ಅವರ ಚರುಕಿನ ಸ್ಟಂಪ್ಗೆ ಬಲಿಯಾದ್ರು. ಪಂದ್ಯವನ್ನ ಗೆಲ್ಲಿಸಿಕೊಟ್ಟ ವಾಟ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ್ರು.

ಟಾಕ್ ಫೈಟ್ನ್ನ ತಿಳಿಗೊಳಿಸಿದ ಕೋಚ್ 
ಶೇನ್ ವಾಟ್ಸನ್ ಜೊತೆಗೆ ಇಶಾಂತ್ ಶರ್ಮಾ ಮತ್ತು ರಬಾಡ ಕಿತ್ತಾಡಿಕೊಂಡಿದ್ದು ಮೈದಾನದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು. ಪಂದ್ಯ ಮುಗಿದ ನಂತರ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡುತ್ತಿದ್ರು. ಈ ವೇಳೆ ಡೆಲ್ಲಿ ಕೋಚ್ ರಿಕಿ ಪಾಟಿಂಗ್ ತಮ್ಮ ಎದುರು ಬಂದ ಶೇನ್ ವಾಟ್ಸನ್ ಜೊತೆ ಪ್ರಕರಣ ಕುರಿತು ವೇಗಿ ರಬಾಡ ಅವರನ್ನ ಕರೆದು ಮಾತನಾಡಿ ಸಮಾಧಾನ ಪಡಿಸಿದ್ರು. ಪಂದ್ಯದ ವೇಳೆ ಬದ್ಧ ಶತ್ರುಗಳಂತೆ ಕಂಡ ಕಗಿಸೋ ರಬಡ ಹಾಗೂ ಶೇನ್ ವಾಟ್ಸನ್, ಪಂದ್ಯದ ಬಳಿಕ ನಗು ಮುಖದೊಂದಿದೆ ಮಾತನಾಡುತ್ತಿದ್ದಂದು ಕ್ರೀಡಾ ಸ್ಪೂರ್ತಿಯ ಪ್ರತಿರೂಪಕ್ಕೆ ಸಾಕ್ಷಿಯಾಯ್ತು..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ