ಭಾರತದ ವಿಮಾನ ಎಂದು ತಿಳಿದು ತನ್ನದೇ ವಿಮಾನ ಹೊಡೆದುರುಳಿಸಿದ ಪಾಕಿಸ್ತಾನ!

ನವದೆಹಲಿದೇಶದ ಗಡಿ ಪ್ರವೇಶಿಸುವ ವೈರಿ ರಾಷ್ಟ್ರಗಳ ಯುದ್ಧ ವಿಮಾನವನ್ನು ಹೊಡೆದುರುಳಿಸುವುದು ಸಾಮಾನ್ಯ. ಆದರೆ, ಪಾಕಿಸ್ತಾನ ತನ್ನದೇ ಪ್ರದೇಶದಲ್ಲಿ, ತನ್ನದೇ ವಿಮಾನವನ್ನು ಹೊಡೆದುರುಳಿಸಿದೆ. ಈ ತಪ್ಪು ನಡೆಯಲು ಚೀನಾದ ಆ್ಯಂಟಿ-ಏರ್​​ ಮಿಸೈಲ್​ ಸಿಸ್ಟಮ್ ಕಾರಣವಂತೆ!

ಪುಲ್ವಾಮಾ ದಾಳಿ ನಂತರದಲ್ಲಿ ಪಾಕಿಸ್ತಾನದ ಬಾಲಕೋಟ್​ ಪ್ರದೇಶದಲ್ಲಿ ಭಾರತೀಯ ಸೇನೆ ಸರ್ಜಿಕಲ್​ ಸ್ಟ್ರೈಕ್​ ನಡೆಸಿತ್ತು. ಇದರಿಂದ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿತ್ತು. ಈ ಘಟನೆ ನಂತರದಲ್ಲಿ ಪಾಕ್​ ಎಚ್ಚೆತ್ತುಕೊಂಡಿದೆ. ಗಡಿ ಪ್ರದೇಶದಲ್ಲಿ ಹದ್ದಿನ ಕಟ್ಟಿಣ್ಣಿದೆ. ಆದರೆ, ದೊಡ್ಡ ತಪ್ಪೊಂದನ್ನು ಎಸಗಿರುವ ಪಾಕ್​, ಭಾರತದ ವಿಮಾನ ಎಂದು ತಿಳಿದು ತನ್ನದೇ ವಿಮಾನವನ್ನು ಹೊಡೆದುರುಳಿಸಿದೆ!

ಈ ವಿಚಾರವನ್ನು ಭಾರತದ ಮಾಜಿ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಟ್ವಿಟ್ಟರ್​ನಲ್ಲಿ ಖಚಿತಪಡಿಸಿದ್ದಾರೆ. “ಪಾಕಿಸ್ತಾನವು ಭಾರತದ ವಿಮಾನವೆಂದು ತಿಳಿದು ತನ್ನದೇ ಎರಡು ಜೆಎಫ್-17 ವಿಮಾನಗಳನ್ನು ಹೊಡೆದುರುಳಿಸಿದೆ,​” ಎಂದು ಬರೆದುಕೊಂಡಿದ್ದಾರೆ.

ಪಾಕ್ ಪ್ರಜೆಯೊಬ್ಬ ಈ ಘಟನೆ ಬಗ್ಗೆ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾನೆ. “ಇದು ನಿಜಕ್ಕೂ ಬೇಸರದ ಸಂಗತಿ. ಮುಲ್ತಾನ್​ನಲ್ಲಿ ಜೆಎಫ್​-17 ವಿಮಾನ ಹೊಡೆದುರುಳಿಸಲಾಗಿದೆ. ಚೀನಾದಿಂದ ಆಮದು ಮಾಡಿಕೊಂಡಿದ್ದ ಆ್ಯಂಟಿ-ಏರ್​​ ಮಿಸೈಲ್​ ಸಿಸ್ಟಮ್​ ನಮ್ಮ ವಿಮಾನವನ್ನು ನಾಶ ಮಾಡಿದೆ. ಚೀನಾದ ಆ್ಯಂಟಿ-ಏರ್​​ ಮಿಸೈಲ್​ ಸಿಸ್ಟಮ್ ನಮ್ಮ ದೇಶಕ್ಕೆ ಮಾರಕ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಈ ಘಟನೆಯಲ್ಲಿ ಪೈಲಟ್​ ಮೃತಪಟ್ಟಿದ್ದಾನೆ,” ಎಂದು ಬರೆದುಕೊಂಡಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ