ಇಂದು ಕೆಕೆಆರ್-ಕಿಂಗ್ಸ್ ಇಲೆವೆನ್ ನಡುವೆ ಬಿಗ್ ಫೈಟ್: ತವರಿನಲ್ಲಿ ಎರಡನೇ ಸವಾಲು ಎದುರಿಸುತ್ತಿದೆ ಡಿ.ಕೆ. ಗ್ಯಾಂಗ್

ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಸರ್ಸ್ – ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿರುವ ಉಭಯ ತಂಡಗಳು ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ಮುಖಾಮುಖಿಯಾಗುತ್ತಿವೆ.

ದಿನೇಶ್ ಕಾರ್ತಿಕ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ಮೊನ್ನೆ ಸನ್ ರೈಸರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ರೋಚಕವಾಗಿ ಗೆದ್ದು ಗೆಲುವಿನ ಕೇಕೆ ಹಾಕಿತ್ತು. ಮೊದಲ ಗೆಲುವಿನಿಂದ ಡಿಕೆ ಗ್ಯಾಂಗ್ ಕಾನ್ಫಿಡೆನ್ಸ್ ಹೆಚ್ಚಿಸಿಕೊಂಡಿದ್ದು ಇದೀಗ ತವರಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಎದುರಿಸಲಿದೆ.

ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮೊನ್ನೆ ಆತಿಥೇಯ ರಾಜಸ್ತಾನ ವಿರುದ್ಧ 14 ರನ್ಗಳ ಅಂತರದಿಂದ ಗೆದ್ದು ಶುಭಾರಂಭ ಮಾಡಿತ್ತು.

ಈ ಗೆಲುವಿನ ಸಂಭ್ರಮ ಆಚರಿಸುತ್ತಿರುವಾಗಲೇ ಕಿಂಗ್ಸ್ ತಂಡಕ್ಕೆ ಮತ್ತೊಂದು ಸವಾಲು ಎದುರಾಗಿದೆ.

ಕೆಕೆಆರ್- ಪಂಜಾಬ್ ಫೈಟ್
ಪಂದ್ಯ 23
ಗೆಲುವು 15
ಸೋಲು 8
ಕೋಲ್ಕತ್ತಾ ಮತ್ತು ಪಂಜಾಬ್ ಐಪಿಎಲ್ನಲ್ಲಿ ಇದುವರೆಗೂ 23 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ15 ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದುಕೊಂಡಿದ್ರೆ. ಇನ್ನೂಳಿದ 8 ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆದ್ದಿದೆ.

ಇಂದು ಬ್ಯಾಟ್ಸ್ಮನ್ಸ್ Vs  ಬೌಲರ್ಸ್ಗಳ ಕದನ
ಹೌದು ಇಂದು ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ನಲ್ಲಿ ನಡೆಯೋದು ಬ್ಯಾಟ್ಸ್ಮನ್ಸ್ ಮತ್ತು ಬೌಲರ್ಸ್ ಗಳ ಕದನ . ಕೋಲ್ಕತ್ತಾ ತಂಡ ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದ್ರೆ ಅಶ್ವಿನ್ ನೇತೃತ್ವದ ಪಂಜಾಬ್ ತಂಡ ಬೌಲಿಂಗ್ ನಲ್ಲಿ ಬಲಿಷ್ಠವಾಗಿದೆ.

ಡಿ.ಕೆ ಗ್ಯಾಂಗ್ಗೆ ತವರಿನಲ್ಲಿ ಎರಡನೇ ಸವಾಲು
ಓಪನರ್ ಕ್ರಿಸ್ ಲೀನ್ ಫ್ಲಾಪ್ ಆಗಿದ್ದು ನೈಟ್ ರೈಡರ್ಸ್ ಚಿಂತೆಗೀಡು ಮಾಡಿದೆ. ಆದ್ರೆ, ನಿತೀಶ್ ರಾಣಾ, ರಾಬಿನ್ ಉತ್ತಪ್ಪ ಉತ್ತಮ ಫಾರ್ಮ್ನಲ್ಲಿರುವುದು ತಂಡಕ್ಕೆ ನೆಮ್ಮದಿಗೆ ಕಾರಣ. ಕಳೆದ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಆಲ್ರೌಂಡರ್ ಆಂಡ್ರೋ ರಸೆಲ್ 19 ಎಸೆತಗಳಲ್ಲಿ 49 ರನ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ರು. ಇಂದಿನ ಪಂದ್ಯದಲ್ಲೂ ಆಂಡ್ರೋ ರಸೆಲ್ ಸಿಡಿದೆದ್ರೆ ಪಂಜಾಬ್ ಪಂಕ್ಚರ್ ಆಗೋದ್ರಲ್ಲಿ ಅನುಮಾನವೇ ಇಲ್ಲ.
ಇನ್ನು ತಂಡದ ಬೌಲಿಂಗ್ ಡಿಪಾರ್ಟ್ಮೆಂಟ್ ಸಾಕಷ್ಟು ಸುಧಾರಿಸಬೇಕಿದೆ. ಮೊನ್ನೆ ಸನರ್ಸರ್ಸ್ ವಿರುದ್ಧ ತಂಡದ ಬೌಲರ್ಸ್ ಗಳು ವಿಕೆಟ್ ಕೀಳಲು ಪರದಾಡಿದ್ರು. ಪಿಯೂಷ್ ಚಾವ್ಲಾ, ಸುನೀಲ್ ನರೈನ್, ಕುಲದೀಪ್ ಯಾದವ್ ಸ್ಪಿನ್ ಜಾಧೂ ಮಾಡಲೇ ಬೇಕಿದೆ.

ಪೇಸರ್ ಲೂಕಿ ಫರ್ಗ್ಯುಸನ್, ಪ್ರಸಿದ್ಧ್ ಕೃಷ್ಣ ಆರಂಭದಲ್ಲೆ ವಿಕೆಟ್ ಕೀಳಬೇಕಿದೆ.

ಬ್ಯಾಟಿಂಗ್ನಲ್ಲಿ ಅಬ್ಬರಿಸಬೇಕು ಪಂಜಾಬ್ ಕಿಂಗ್ಸ್
ಈಡನ್ ಗಾರ್ಡನ್ಸ್ ಅಂಗಳ ಬ್ಯಾಟಿಂಗ್ ಪಿಚ್ ಆಗಿರೋದ್ರಿಂದ ಪಂಜಾಬ್ ಬ್ಯಾಟ್ಸ್ಮನ್ಗಳು ರನ್ ಹೊಳೆಯನ್ನ ಹರಿಸಬೇಕು.

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಯೂನಿವರ್ಸಲ್ ಬಾಸ್ ಕ್ರಿಸ್ಗೇಲ್ ಅಬ್ಬರಿಸಿದ್ದು ತಂಡಕ್ಕೆ ಆನೆ ಬಲ ತುಂಬಿದೆ. ಕಳೆದ ಪಂದ್ಯದಲ್ಲಿ ಬೇಗ ವಿಕೆಟ್ ಒಪ್ಪಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಆeಛಿeಟಿಣ ಓಪನಿಂಗ್ ಕೊಡಬೇಕಿದೆ. ಇನ್ನುಳಿದಂತೆ ತಂಡದ ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ಗಳು ಕ್ರೀಸ್ ನೆಲ ಕಚ್ಚಿ ನಿಂತು ಮ್ಯಾಚ್ ಫಿನಿಶರ್ಸ್ಗಳಾಗಬೇಕಿದೆ.

ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಮೊಹ್ಮದ್ ಶಮಿ ಕೇರಂ ಸ್ಪೆಷಲಿಸ್ಟ್ ರವಿಚಂದ್ರನ್ ಅಶ್ವಿನ್, ಮುಜೀಬ್ ರಹಮಾನ್ ವಿಕೆಟ್ ಬೇಟೆಯಾಡಲು ರೆಡಿಯಾಗಿದ್ದಾರೆ.

ಒಟ್ನಲ್ಲಿ ಕ್ರಿಕೆಟ್ ಕಾಶಿಯಲ್ಲಿ ಇಂದು ಉಭಯ ತಂಡಗಳು ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿದ್ದು ಯಾರು ಗೆಲ್ಲುತ್ತಾರೆ ಅನ್ನೊದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ