
ನವದೆಹಲಿ,ಮಾ.27- ಲೋಕಸಭಾ ಚುನಾವಣೆಗೂ ಮೊದಲೇ ಪಿಎಂ ನರೇಂದ್ರ ಮೋದಿ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ವಿಪಕ್ಷಗಳು ಚುನಾವಣೆ ಆಯೋಗಕ್ಕೆ ದೂರು ನೀಡಿವೆ.
ಈ ಬೆನ್ನಲ್ಲೆ ಇಂದು ಚುನಾವಣಾ ಆಯೋಗದ ಅಧಿಕಾರಿಗಳು ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ನರೇಂದ್ರ ಮೋದಿ ಚಿತ್ರ ನಿರ್ಮಾಪಕರಿಗೆ ಸೂಚನೆ ನೀಡಿದ್ದಾರೆ.
ಈ ಹಿಂದೆ ಮೋದಿ ಸಿನಿಮಾವನ್ನು ಏಪ್ರಿಲ್ ತಿಂಗಳ ಮಧ್ಯಂತರದಲ್ಲಿ ಬಿಡಗುಡೆ ಮಾಡುವುದಾಗಿ ತಿಳಿಸಿದ್ದರು, ಕೆಲವು ಹಠಾತ್ ಬೆಳವಣಿಗೆಗಳ ಬಳಿಕ ಚಿತ್ರವನ್ನು ಏ.5ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ವಿತರಕರು ಹೇಳಿಕೊಂಡಿದ್ದರು.
ಚುನಾವಣೆಗೂ ಮುನ್ನ ಚಿತ್ರ ಬಿಡುಗಡೆ ಮಾಡುವುದರಿಂದ ಮೋದಿ ಪರ ಪರೋಕ್ಷವಾಗಿ ಪ್ರಚಾರ ಮಾಡಿದಂತಾಗುತ್ತದೆ. ಮೋದಿ ಅವರ ಆತ್ಮಕಥೆಯನ್ನು ಲೋಕಸಭಾ ಚುನಾವಣಾ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ವಿಪಕ್ಷಗಳು ದೂರಿದ್ದವು.