ಟಿ.ಟಿ.ವಿ ದಿನಕರನ್​ ಬಣಕ್ಕೆ ಪ್ರೆಷರ್​ ಕುಕ್ಕರ್​ ಚಿಹ್ನೆ ಸ್ವಾಮತ್ವ ನಿರಾಕರಿಸಿದ ಸುಪ್ರೀಂ

ನವದೆಹಲಿ: ಪಕ್ಷಕ್ಕೆ ಪ್ರೆಷರ್​ ಕುಕ್ಕರ್​ ಚಿಹ್ನೆಯನ್ನು ಕಾಯಂಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸುವಂತೆ ಕೋರಿ ಎಐಎಡಿಎಂಕೆಯ ಟಿ.ಟಿ.ವಿ. ದಿನಕರನ್​ ಬಣ ಸಲ್ಲಿಸಿದ್ದ ಮನವಿ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಈ ಪಕ್ಷದವರಿಗೆ ಲಭ್ಯವಿರುವ ಉಚಿತ ಚಿಹ್ನೆಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಇದೇ ವೇಳೆ ಪಕ್ಷಕ್ಕೆ ಚಿಹ್ನೆಗಳನ್ನು ನೀಡುವಂತೆ ಹೇಳಿದ ಮಾತ್ರಕ್ಕೆ ಆ ಪಕ್ಷಕ್ಕೆ ಅಧಿಕೃತ ರಾಜಕೀಯ ಪಕ್ಷದ ಮಾನ್ಯತೆ ನೀಡಿದಂತೆ ಅರ್ಥವಲ್ಲ. ಆ ಪಕ್ಷದಿಂದ ಗೆಲ್ಲುವ ಎಲ್ಲ ಅಭ್ಯರ್ಥಿಗಳನ್ನು ಪಕ್ಷೇತರ ಅಭ್ಯರ್ಥಿಗಳು ಎಂದು ಪರಿಗಣಿಸುವಂತೆ ಸುಪ್ರೀಂಕೋರ್ಟ್​ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

SC Refuses To Acknowledge TTV Dhinakaran Faction’s Claim Over ‘Pressure Cooker’ Symbol

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ