ಮುರಳಿ ಮನೋಹರ ಜೋಷಿ, ಎಲ್.ಕೆ.ಅಡ್ವಾಣಿಯವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಸೂಚಿಸಿದ ಬಿಜೆಪಿ

ನವದೆಹಲಿ: ಬಿಜೆಪಿ ಹಿರಿಯ ನಾಯಕ, ಸಂಸದ ಮುರಳಿ ಮನೋಹರ ಜೋಷಿ, ಹಾಗೂ ಮಾಜಿ ಉಪ ಪ್ರಧಾನಿ, ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿ ಸೇರಿದಂತೆ ಪಕ್ಷದ ಕೆಲ ಹಿರೀಯ ನಾಯಕರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಭಾರತೀಯ ಜನತಾ ಪಕ್ಷ ತಿಳಿಸಿದೆ. ಈ ಬಳವಣಿಗೆಗಳ ಕುರಿತು ಮುರಳಿ ಮನೋಹರ್ ಜೋಷಿಯವರ ಕಚೇರಿ ಸ್ಪಷ್ಟಪಡಿಸಿದೆ.

ಈ ಕುರಿತು ಮುರಳಿ ಮನೋಹರ ಜೋಷಿಯವರು ಕಾನ್ಪುರ ಮತದಾರರಿಗೆ ಪತ್ರ ಬರೆದಿದ್ದು, ”ಕಾನ್ಪುರದ ನನ್ನ ಆತ್ಮೀಯ ಮತದಾರರೇ, ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ರಾಮ್‌ಲಾಲ್‌ ತಮಗೆ ಇಂದು ತಾನು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದೆಂದು ತಿಳಿಸಿದೆ. ಕಾನ್ಪುರ ಸೇರಿ ಎಲ್ಲೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂದು ಸೂಚಿಸಿದೆ” ಎಂದು ಜೋಷಿ ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.

2009ರ ಚುನಾವಣೆಯಲ್ಲಿ ಗೆದ್ದು ವಾರಾಣಸಿ ಲೋಕಸಪರ್ದ್ಭೆ ಕ್ಷೇತ್ರದ ಸಂಸದರಾಗಿದ್ದ ಮುರಳಿ ಮನೋಹರ್ ಜೋಷಿ, ಬಳಿಕ ಆ ಕ್ಷೇತ್ರವನ್ನು 2014ರಲ್ಲಿ ಪ್ರಧಾನಿ ಮೋದಿಗೆ ಬಿಟ್ಟುಕೊಟ್ಟಿದ್ದರು. ಇನ್ನು, ಸಂಸತ್ತಿನ ಅಂದಾಜು ಸಮಿತಿ ಮುಖ್ಯಸ್ಥರಾಗಿರುವ ಮುರಳಿ ಮನೋಹರ್ ಜೋಷಿ, ಉದ್ಯೋಗ, ಜಿಡಿಪಿ ಹಾಗೂ ಎನ್‌ಪಿಎ ವಿಚಾರಗಳಲ್ಲಿ ತಮ್ಮ ಹೇಳಿಕೆಗಳಿಂದ ಕೇಂದ್ರ ಸರಕಾರಕ್ಕೆ ಮುಜುಗರ ತಂದಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ಹಿರಿಯ ನಾಯಕರು ಯುವ ನಾಯಕರಿಗಾಗಿ ತಮ್ಮ ಸ್ಥಾನ ಬಿಟ್ಟುಕೊಡಬೇಕು ಎಂಬುದು ಬಿಜೆಪಿಯ ನಿರ್ಧಾರ ಎಂದು ಪಕ್ಷದ ಹಲವು ನಾಯಕರು ತಿಳಿಸಿದ್ದಾರೆ. ಹೀಗಾಗಿ ಮುರಳಿ ಮನೋಹರ್ ಜೋಷಿ ಅಷ್ಟೇ ಅಲ್ಲದೆ, ಅಡ್ವಾಣಿ, ಬಿ.ಸಿ. ಖಂಡೂರಿ, ಕರಿಯಾ ಮುಂಡಾ, ಕಲ್ರಾಜ್‌ ಮಿಶ್ರಾ ಹಾಗೂ ಬಿಜೋಯ ಚಕ್ರವರ್ತಿ ಸೇರಿ 80ಕ್ಕೂ ಅಧಿಕ ವರ್ಷದ ಹಲವು ಸಂಸದರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ.

Have been asked not to contest Lok Sabha polls: Murli Manohar Joshi …

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ