ಸಿಬಿಐಗೆ ಸುಪ್ರೀಂ ಕೋರ್ಟ್ ನೋಟೀಸ್

ನವದೆಹಲಿ: ಅಖಿಲೇಶ್ ಯಾದವ್ ಹಾಗೂ ಎಸ್ ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿಬಿಐ ಗೆ ನೊಟೀಸ್ ಜಾರಿ ಮಾಡಿದೆ.

ತನಿಖೆಯ ಸ್ಥಿತಿಗತಿಗಳ ಬಗ್ಗೆ ಎರಡು ವಾರಗಳಲ್ಲಿ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸಿಬಿಐ ಗೆ ಸೂಚನೆ ನೀಡಿದೆ.

ಕಾಂಗ್ರೆಸ್ ನಾಯಕ ವಿಶ್ವನಾಥ್ ಚತುರ್ವೇದಿ ಮುಲಾಯಂ ಸಿಂಗ್ ಯಾದವ್ ಹಾಗೂ ಪುತ್ರ ಅಖಿಲೇಶ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸ್ಥಿತಿಗತಿಗಳ ವರದಿಯನ್ನು ನೀಡಬೇಕೆಂದು ಸಿಬಿಐ ಗೆ ನಿರ್ದೇಶನ ನೀಡಲು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

Supreme Court notice to CBI in disproportionate assets case against mulayam singh yadav, akhilesh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ