ಇಂಡಿಯನ್ಸ್ ತಂಡ ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲೆ ಸೋಲು ಕಂಡಿದೆ. ವಾಂಖೆಡೆ ಅಂಗಳದಲ್ಲಿ ಶ್ರೇಯಸ್ ಅಯ್ಯರ್ ಪಡೆ ರೋಹಿತ್ ಪಡೆ ಮೇಲೆ ಹೇಗೆ ಸವಾರಿ ಮಾಡಿತು ಅನ್ನೋದನ್ನ ನೋಡೋಣ ಬನ್ನಿ
ಆರಂಭಿಕ ಆಘಾತ ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಓಪನರ್ಸ್ಗಳಾದ ಓಪನರ್ಸ್ಗಳಾದ ಪೃಥ್ವಿ ಶಾ ಮತ್ತು ಶಿಖರ್ ಧವನ್ ಸಾಲಿಡ್ ಓಪನಿಂಗ್ ಕೊಡುವಲ್ಲಿ ಎಡವಿದ್ರು. 7 ರನ್ ಗಳಿಸಿದ್ದ ಓಪನರ್ ಪೃಥ್ವಿ ಶಾ ವೇಗಿ ಕ್ಲಿನಾಗಾನ್ ಎಸೆತದಲ್ಲಿ ವಿಕೆಟ್ ಕೀಪರ್ ಡಿಕಾಕ್ಗೆ ಕ್ಯಾಚ್ ನೀಡಿ ಹೊರ ನಡೆದ್ರು.
ಈ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಒಂದನೇ ಕ್ರಮಾಂಕದಲ್ಲಿ ಬಂದಿದ್ದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ವೇಗಿ ಕ್ಲಿನಾಗಾನ್ ಎಸೆತದಲ್ಲಿ ಪೋಲಾರ್ಡ್ಗೆ ಕ್ಯಾಚ್ ನೀಡಿ ಹೊರ ನಡೆದ್ರು.
ಧವನ್, ಇನ್ಗ್ರಾಮ್ ಬೊಂಬಾಟ್ ಬ್ಯಾಟಿಂಗ್
29 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿದ್ದ ಡೆಲ್ಲಿ ತಂಡಕ್ಕೆ ಓನರ್ ಶಿಖರ್ ಧವನ್ ಮತ್ತು ಕಾಲಿನ್ ಇನ್ಗ್ರಾಮ್ ಆಸರೆಯಾದ್ರು. ಅಡಿuಛಿiಚಿಟ ಟೈಮ್ನಲ್ಲಿ ಆಗಮಿಸಿದ ಇನ್ಗ್ರಾಮ್ ಧವನ್ಗೆ ಒಳ್ಳೆಯ ಸಾತ್ ಕೊಟ್ರು. ಮುಂಬೈ ಬೌಲರ್ಸ್ಗಳನ್ನ ಚೆಂಡಾಡಿದ ಈ ಜೋಡಿ 83 ರನ್ಗಳ ಜೋತೆಯಾಟ ನೀಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ರು.
ಆದರೆ 47 ರನ್ಗಳಿಸಿ ಅರ್ಧ ಶತಕದಂಚಿನಲ್ಲಿದ್ದ ಕಾಲಿನ್ ಇನ್ಗ್ರಾಮ್ ಕಟ್ಟಿಂಗ್ಗೆ ಬಲಿಯಾದ್ರೆ ಶಿಖರ್ ಧವನ್ ಹಾರ್ದಿಕ್ ಪಾಂಡ್ಯಗೆ ಬಲಿಯಾದ್ರು.
ಅರ್ಧ ಶತಕ ಬಾರಿಸಿದ ರೈಸಿಂಗ್ ಸ್ಟಾರ್ ರಿಷಬ್ ಪಂತ್
ಕೊನೆಯಲ್ಲಿ ರಿಷಭ್ ಪಂತ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಮಿಂಚಿದ್ರು. ಕೇವಲ 18 ಎಸೆತದಲ್ಲಿ ಅರ್ಧ ಶತಕ ಪೂರೈಸಿದ ರಿಷಭ್ ಪಂತ್ ತಂಡದ ಸ್ಕೋರ್ ಹೆಚ್ಚಿಸಿದ್ರು. ಒಟ್ಟು 27 ಎಸೆತ ಎದುರಿಸಿದ ಪಂತ್ 7 ಬೌಂಡರಿ 7 ಸಿಕ್ಸರ್ ಬಾರಿಸಿ ಒಟ್ಟು ಅಜೇಯ 78 ರನ್ ಗಳಿಸಿದ್ರು.
ಡೆಲ್ಲಿ ನಿಗದಿತ ಓವರ್ನಲ್ಲಿ 6 ವಿಕೆಟ್ಗೆ 213 ರನ್
ಕೊನೆಯಲ್ಲಿ ಬಂದ ಕೀಮೊ ಪೌಲ್ 3, ಅಕ್ಷರ್ ಪಟೇಲ್ 4 ರನ್ ಗಳಿಸಿದ್ರು. ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ ಒಟ್ಟು 213 ರನ್ ಗಳಿಸಿತು. ಮುಂಬೈ ಪರ ವೇಗಿ ಕ್ಲೀನಾಗಾನ್ 3 ವಿಕೆಟ್ ಪಡೆದು ಮಿಂಚಿದ್ರು.
ಆರಂಭಿಕ ಆಘಾತ ಅನುಭವಿಸಿದ ಮುಂಬೈ ಇಂಡಿಯನ್ಸ್
214 ರನ್ಗಳ ಬಿಗ್ ಟಾಗೆರ್ಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ಬಂದ ಸೂರ್ಯ ಕುಮಾರ್ ರನೌಟ್ ಬಲಗೆ ಬಿದ್ರು. ಚೇತರಿಕೆಯ ಆಟ ಪ್ರದರ್ಶಿಸಿದ್ದ ಕ್ವಿಂಟಾನ್ ಡಿಕಾಕ್ 27 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಕಿರಾನ್ ಪೊಲಾರ್ಡ್ 21 , ಕೃನಾಲ್ ಪಾಂಡ್ಯ 32, ಕಟ್ಟಿಂಗ್ 3 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿದ್ರು. ಏಕಾಂಗಿ ಹೋರಾಟ ಮಾಡಿದ ಯುವರಾಜ್ ಸಿಂಗ್ ಅರ್ಧ ಶತಕ ಬಾರಿಸಿ ತಂಡದ ಪರ ಹೈಯೆಸ್ಟ್ ಸ್ಕೋರರ್ ಎನಿಸಿದ್ರು. ಕೊನೆಗೆ ಡೆಲ್ಲಿ ತಂಡ ನಿಗದಿತ ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 176 ರನ್ಗಳಿಸಿ ಸೋಲು ಕಂಡಿತು.