ಚಿಕ್ಕಬಳ್ಳಾಪುರ, ಮಾ.24- ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ರ ನೀತಿ ಸಂಹಿತೆ ಜಾರಿಯಾದ ಮಾ.18ರಿಂದ 22 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಅಬಕಾರಿ ಇಲಾಖಾ ವತಿಯಿಂದ 134 ದಾಳಿಗಳನ್ನು ನಡೆಸಿ, 8 ಘೋರ, 9-ಬಿಎಲ್ಸಿ, 19-15(ಎ) ಪ್ರಕರಣಗಳನ್ನು ದಾಖಲಿಸಿ, 28.465 ಲೀಟರ್ ಮದ್ಯ, 7.860 ಲೀಟರ್ ಬೀಯರ್, 49 ಲೀಟರ್ ಸೇಂದಿಯನ್ನು ಹಾಗೂ 6 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಜಪ್ತಿ ಮಾಡಿರುವ ಮದ್ಯದ ಮೌಲ್ಯ 13,480ರೂ.ಗಳಾಗಿದ್ದು, 6 ದ್ವಿಚಕ್ರ ವಾಹನಗಳ ಮೌಲ್ಯ 1,42,000ರೂ. ಗಳಾಗಿರುತ್ತದೆ. ಒಟ್ಟಾರೆಯಾಗಿ ನೀತಿ ಸಂಹಿತೆ ಜಾರಿಯಾದ ಮಾ.10ರಿಂದ 22 ರ ವರೆಗೆ 303 ದಾಳಿಗಳನ್ನು ನಡೆಸಿ, 23 ಘೋರ, 21-ಬಿಎಲ್ಸಿ, 51-15(ಎ) ಪ್ರಕರಣಗಳು ಸೇರಿ ಒಟ್ಟು 95 ಪ್ರಕರಣಗಳನ್ನು ದಾಖಲಿಸಲಾಗಿದೆ. 1280.815 ಲೀಟರ್ ಮದ್ಯ, 1043 ಲೀಟರ್ ಬೀಯರ್, 101 ಲೀಟರ್ ಸೇಂದಿ ಹಾಗೂ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡಿರುವ ಮದ್ಯದ ಮೌಲ್ಯ 14,94,802ರೂ.ಗಳಾಗಿದ್ದು, 15 ದ್ವಿಚಕ್ರ ವಾಹನಗಳ ಮೌಲ್ಯ 5,17,000ರೂ., ಈ ಪ್ರಕರಣಗಳಲ್ಲಿ 14 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಸಿ.ಜಗದೀಶ್ ತಿಳಿಸಿದ್ದಾರೆ.