ಕಾರಿನಲ್ಲಿ ಸಾಗಿಸುತ್ತಿದ್ದ ಹಣ ವಶಪಡಿಸಿಕೊಂಡ ಚುನಾವಣ ತಂಡ

ಬಾಗೇಪಲ್ಲಿ,ಮಾ.24- ಸ್ವಿಫ್ಟ್ ಕಾರೊಂದರಲ್ಲಿ ಸಾಗಿಸುತ್ತಿದ್ದ 2.54 ಲಕ್ಷ ರೂ.ಗಳನ್ನು ಚುನಾವಣಾ ವೀಕ್ಷಕ ತಂಡ ವಶಪಡಿಸಿಕೊಂಡಿದೆ.

ಬಾಗೇಪಲ್ಲಿ ತಾಲ್ಲೂಕಿನ ಜಿಮದ್ದೆಪಲ್ಲಿ ಗ್ರಾಮದ ಸಮೀಪ ಚೆಕ್‍ಪೋಸ್ಟ್ ನಲ್ಲಿ ವೀಕ್ಷಕ ತಂಡ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಸ್ವಿಫ್ಟ್ ಕಾರಿನಲ್ಲಿ 2.54 ಲಕ್ಷ ರೂ.ಗಳು ಇದ್ದುದು ಪತ್ತೆಯಾಗಿದೆ.

ತಕ್ಷಣ ಕಾರು, ಹಣ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಚಾಲಕನನ್ನು ತಂಡ ವಿಚಾರಣೆಗೊಳಪಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ