ನವದೆಹಲಿ: ಕೇಂದ್ರ ಸರಕಾರ ವೈಸ್ ಅಡ್ಮಿರಲ್ ಕರಮ್ ಬೀರ್ ಸಿಂಗ್ ಅವರನ್ನು ಮುಂದಿನ ನೌಕಾ ಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.
ಮೇ 31ರಂದು ಹಾಲಿ ನೌಕಾ ಪಡೆ ಮುಖ್ಯಸ್ಥ ಸುನೀಲ್ ಲಾಂಬಾ ಅವರ ಅಧಿಕಾರಾವಧಿ ಮುಗಿಯಲಿದ್ದು ಈ ಹಿನ್ನಲೆಯಲ್ಲಿ ಆ ಬಳಿಕ ಅವರ ಸ್ಥಾನವನ್ನು ಕರಮ್ ಬೀರ್ ಸಿಂಗ್ ಅಧಿಕಾರ ವಹಿಸಿಕೊಳ್ಲಲಿದ್ದಾರೆ.
ವೈಸ್ ಅಡ್ಮಿರಲ್ ಕರಮ್ಬೀರ್ ಸಿಂಗ್, ಪಿವಿಎಸ್ಎಂ, ಎವಿಎಸ್ಎಂ, 2017ರ ಅಕ್ಟೋಬರ್ 31ರಂದು ಈಸ್ಟರ್ನ್ ನೇವಲ್ ಕಮಾಂಡ್ ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಇವರು ಮಹಾರಾಷ್ಟ್ರದ ಖಡಕ್ವಾಸ್ಲಾ ದಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್ಡಿಎ) ಹಳೆವಿದ್ಯಾರ್ಥಿಯಾಗಿದ್ದಾರೆ.
vice admiral karambir singh, next indian navy chief