ನಕಲಿ ಐಟಿ ಅಧಿಕಾರಿಯಿಂದ ತಹಶೀಲ್ದಾರ್ ಅವರಿಗೆ ಬೆದರಿಕೆ ಕರೆ

ಮಧುಗಿರಿ, ಮಾ.23- ಮೈಸೂರಿನಿಂದ ಇತ್ತೀಚೆಗೆ ಮಧುಗಿರಿಗೆ ವರ್ಗಾವಣೆಯಾಗಿ ಬಂದ ತಹಶೀಲ್ದಾರ್ ಅವರಿಗೆ ನಕಲಿ ಐಟಿ ಅಧಿಕಾರಿಯೊಬ್ಬ ಕರೆ ಮಾಡಿ ನಿಮ್ಮ ಮನೆ ರೈಡ್ ಮಾಡುತ್ತಿದ್ದೇನೆಂದು ಬೆದರಿಸಿರುವವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧುಗಿರಿ ತಹಶೀಲ್ದಾರ್ ರಮೇಶ್ ಬಾಬು ಅಧಿಕಾರ ಸ್ವೀಕರಿಸಿ ಕೆಲ ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದು, 9036001217 ನಂಬರ್‍ನಿಂದ ಕಿಡಿಗೇಡಿಯೊಬ್ಬ ದೂರವಾಣಿ ಕರೆ ಮಾಡಿ ನಿಮ್ಮ ಮನೆಯನ್ನು ರೈಡ್ ಮಾಡಲು ಬರುತ್ತಿದ್ದೆನೆ ಅಂತಾ ಬೆದರಿಕೆ ಹಾಕಿದ್ದಾನೆ.

ತಹಶೀಲ್ದಾರ್ ರವರು ಕರೆಯ ಬಗ್ಗೆ ಅನುಮಾನ ಗೊಂಡು ಕರೆ ಮಾಡಿದ ವ್ಯಕ್ತಿಯ ವಿವರಗಳನ್ನು ತಿಳಿದುಕೊಳ್ಳುವಂತೆ ತನ್ನ ಸ್ನೇಹಿತರಿಗೆ ತಿಳಿಸಿದ್ದರು.

ಟ್ರೂ ಕಾಲರ್ ನಲ್ಲಿ ಪರೀಶೀಲಿಸಿದರೆ ಮಂಜುನಾಥ್ ಫೇಕ್ ಐಟಿ ಎಂದು ತಿಳಿದು ಬರುತ್ತಿದೆ. ತಾಲ್ಲೂಕು ದಂಡಾಧಿಕಾರಿಯಾದ ನನಗೆ ಈ ರೀತಿ ಆದಾಯ ತೆರಿಗೆ ಎಂದು ಬ್ಲಾಕ್ ಮೇಲ್ ಮಾಡಿರುವುದರಿಂದ ಇತನನ್ನು ಪತ್ತೆ ಹಚ್ಚಿ ಇವನ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳ ಬೇಕೆಂದು ದೂರು ದಾಖಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ