ಮೈಸೂರು,ಮಾ.23- ನಗರದಲ್ಲಿ ಇಂದು ಬೆಳಗ್ಗೆ ಖೋಟಾನೋಟು ಚಲಾವಣೆಯಾಗಿದ್ದು, ಮಹಾತ್ಮಾಗಾಂಧಿ ರಸ್ತೆಯಲ್ಲಿ 200 ರೂ.ಮುಖಬೆಲೆಯ ಖೋಟಾನೋಟು ಪತ್ತೆಯಾಗಿದೆ.
ಫಾರೂಖ್ ಎಂಬುವರು ಮಹಾತ್ಮಗಾಂಧಿ ರಸ್ತೆಯಲ್ಲಿ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದು, ಬೆಳಗ್ಗೆ ಬಂದ ವ್ಯಕ್ತಿಯೊಬ್ಬರು 130 ರೂ.ಗಳ ಸೊಪ್ಪು ಖರೀದಿಸಿ 200 ರೂ. ನೋಟು ನೀಡಿದ್ದರು.
ಫಾರೂಖ್ ಅದನ್ನು ಸರಿಯಾಗಿ ಗಮನಿಸದೆ ಚಿಲ್ಲರೆ ಹಣ ನೀಡಿದ್ದಾರೆ. ನಂತರ ಬೇರೊಬ್ಬರು ಸೊಪ್ಪು ಖರೀದಿಸಲು ಬಂದಾಗ ಇದೇ 200 ರೂ. ನೋಟು ನೀಡಿದ್ದು, ಇದನ್ನು ಗಮನಿಸಿದ ಆ ವ್ಯಕ್ತಿ ಇದು ಖೋಟಾನೋಟು ಇದನ್ನು ನಿಮಗೆ ನೀಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ನಾವು 100-200 ರೂ. ಬಂಡವಾಳ ಹಾಕಿ ವ್ಯಾಪಾರ ಮಾಡುತ್ತೇವೆ ಎಂದು ಅವಲತ್ತುಕೊಂಡಿದ್ದು, ಈ ಬಗ್ಗೆ ನಜರ್ಬಾದ್ ಠಾಣೆಯಲ್ಲಿ ಫಾರೂಖ್ ದೂರು ದಾಖಲಿಸಿದ್ದಾರೆ.