ನಾನು ನ್ಯಾಯವನ್ನು ಗೌರವಿಸುವ ವ್ಯಕ್ತಿ-ಸಚಿವ ಡಿ.ಕೆ.ಶಿವಕುಮಾರ್

ಹುಬ್ಬಳ್ಳಿ,ಮಾ.23- ನಾನು ನ್ಯಾಯವನ್ನು ಗೌರವಿಸುವ ವ್ಯಕ್ತಿ. ಡೈರಿ ವಿಚಾರವಾಗಿ ಯಾರ್ಯಾರೋ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಆ ಬಗ್ಗೆ ಈಗಲೇ ಏನನ್ನು ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಜಲಸಂಪನೂಲ ಸಚಿವ ಡಿ.ಕೆ.ಶಿವಕುಮಾರ್ ಕುತೂಹಲ ಮೂಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಡೈರಿ ವಿಚಾರ ಪ್ರಸ್ತಾಪದ ಹಿನ್ನಲೆಯಲ್ಲಿ ಬಹಳಷ್ಟು ಚರ್ಚೆಗಳು ಆಗುತ್ತಿದ್ದು, ಈ ಹಿನ್ನಲೆಯಲ್ಲಿ ಹಲವಾರು ನಾಯಕರು ಮಾತನಾಡುತ್ತಿದ್ದಾರೆ. ಸದ್ಯಕ್ಕೆ ನಾನು ಏನನ್ನೂ ಹೇಳುವುದಿಲ್ಲ. ನ್ಯಾಯವನ್ನು ಗೌರವಿಸುತ್ತೇನೆ. ಅದರಂತೆಯೇ ನಡೆಯುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ