ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ವಿಧಿವಶ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಖಾಸಗಿ ಕಾರ್ಯಕ್ರಮಕ್ಕೆಂದು ಶುಕ್ರವಾರ ಹುಬ್ಬಳ್ಳಿಗೆ ತೆರಳಿದ್ದ ಅವರಿಗೆ ಹೃದಯಾಘಾತ ಉಂಟಾಗಿದೆ. ಕೂಡಲೇ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಕಳೆದ ತಿಂಗಳು ವಿಷಾಹಾರ ಸೇವನೆಯಿಂದಾಗಿ ಅವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

56 ವರ್ಷದ ಶಿವಳ್ಳಿ 1999ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ದಿ. ಎಸ್. ಬಂಗಾರಪ್ಪ ಅವರ ಬೆಂಬಲಿಗರಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ 3 ಬಾರಿ ಸೋಲು ಹಾಗೂ 3 ಬಾರಿ ಗೆಲುವು ಕಂಡಿದ್ದಾರೆ. 2 ಬಾರಿ ಪಕ್ಷೇತರರಾಗಿಯೂ ಚುನಾವಣೆ ಕಣಕ್ಕೆ ಇಳಿದಿದ್ದರು. 1999, 2013, 2018ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿರುವ ಅವರು ರೈತ ಪರ ಹೋರಾಟದ ಮೂಲಕ ಸಾರ್ವಜನಿಕ ಬದುಕಿಗೆ ಬಂದವರು. ನವಲಗುಂದ ತಾಲೂಕಿನ ಶೆಲವಡಿ ಗ್ರಾಮದಲ್ಲಿ ಜನಿಸಿರುವ ಅವರು ಕುಂದಗೋಳ ತಾಲೂಕು ಯರಗುಪ್ಪಿಯವರು.
ನಾಳೆ ಶನಿವಾರದಂದು ಸಚಿವರ ಹುಟ್ಟೂರು ಕುಂದಗೋಳ ತಾಲೂಕು ಯರಗುಪ್ಪಿಯಲ್ಲಿ ಅಂತ್ಯಸಂಸ್ಕಾರ‌ನಡೆಯಲಿದೆ.ಅವರಿಗೆ ಒಬ್ಬ ಪುತ್ರ ಅಮರಸಿಂಹ , ಇಬ್ಬರು ಪುತ್ರಿಯರು ಇದ್ದಾರೆ.
ದೀಪಾ ಎಂಜಿನಿಯರಿಂಗ್ ರೂಪಾ ಹೈಸ್ಕೂಲ್ ಓದುತ್ತಿದ್ದಾರೆ.

: ಹುಬ್ಬಳ್ಳಿ-03 ; ಸಿ ಎಸ್ ಶಿವಳ್ಳಿ ರಾಜಕೀಯ ಹಾಗೂ ಕೌಟುಂಬಿಕ ಪರಿಚಯ…

ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಶಾಸಕ ಸಿ‌ಎಸ್ ಶಿವಳ್ಳಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಂದಗೋಳ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿ ಎಸ್ ಶಿವಳ್ಳಿ ಈ ಹಿಂದಿನ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗುವ ಕನಸು ‌ಕಂಡಿದ್ದರು. ಆದ್ರೆ ಆಗ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು. ಆದ್ರೆ ಈ‌ಬಾರಿ ಕುರುಬ ‌ಕೋಟಾದಡಿ ಪೌರಾಡಳಿ ಸಚಿವರಾಗಿದ್ದರು.

ಹೆಸರು: ಚನ್ನಬಸಪ್ಪ ಎಸ್. ಶಿವಳ್ಳಿ.

ತಂದೆಯ ಹೆಸರು: ಸತ್ಯಪ್ಪ

ತಾಯಿಯ ಹೆಸರು: ಗಂಗಮ್ಮ

ಪತ್ನಿ: ಕುಸುಮಾ

ವಿದ್ಯಾಭ್ಯಾಸ: ಬಿಎ

ಹುಟ್ಟೂರು: ಕುಂದಗೋಳ ತಾಲೂಕು ಯರಗುಪ್ಪಿ

ಶಿವಳ್ಳಿಗೆ ಎಂಟು ಜನರ ಸಹೋದರ ಸಹೋದರಿಯರು

ಸಹೋದರರು- ಷಣ್ಮುಖಪ್ಪ, ಮುತ್ತು, ಅಡಿವೆಪ್ಪ

ಸಹೋದರಿಯರು-ಮೂವರು

ಮಕ್ಕಳು- ಅಮರಶಿವ ಮಗ ಹಾಗೂ ಇಬ್ಬರು ಪುತ್ರಿಯರು

ಜನ್ಮ ದಿನಾಂಕ: 12-11-1962

ಜಾತಿ: ಕುರುಬ.

ಎರಡು ಬಾರಿ ಪಕ್ಷೇತರನಾಗಿ ಚುನಾವಣಾ ಕಣಕ್ಕೆ.

1999 ಕಾಂಗ್ರೆಸ್ ಪಕ್ಷಕ್ಕೆ ಎಂಟ್ರಿ.

ಇತಿಹಾಸ: ಕುಂದಗೋಳ ತಾಲೂಕಿನಿಂದ ರಾಜಕೀಯ ವೃತ್ತಿ ಆರಂಭ.

ಗೆಲುವು: ಮೂರು ಬಾರಿ ಗೆಲುವು (1999, 2013, 2018 )

ಸೋಲು: ಮೂರು ಬಾರಿ.
(1994, 2004, 2008,)

ಅನುಭವ: 2013 ಸಿಎಂ ಸಂಸದೀಯ ಕಾರ್ಯದರ್ಶಿ.

ಮಕ್ಕಳು: ದೀಪಾ, ರೂಪಾ, ಅಮರಶಿವ.

ಸಾಧನೆ: ರೈತ ಹೋರಾಟಗಾರ, ಮಹದಾಯಿ ಹೋರಾಟಗಾರ—-


ಸಂತಾಪ
ಪೌರಾಡಳಿತ ಸಚಿವರಾದ ಶ್ರೀ ಸಿ.ಎಸ್.ಶಿವಳ್ಳಿ ಅವರ ನಿಧನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಕೋರಿರುವ ಅವರು ಮೃತರ ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಅವರು ಪ್ರಾರ್ಥಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ