ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಪ್ರಕಾಶ್ ರಾಜ್; ನಟಿ ಸಂಯುಕ್ತಾ ಹೊರನಾಡು ಸೇರಿ ನೂರಾರು ಬೆಂಬಲಿಗರ ಸಾಥ್​

ಬೆಂಗಳೂರುಬೆಂಗಳೂರು ಸೆಂಟ್ರಲ್​ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬಹುಭಾಷಾ ನಟ ಪ್ರಕಾಶ್​ ರಾಜ್​ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ್ದಾರೆ. ಅವರೊಂದಿಗೆ ಹೆಂಡತಿ ಪೋನಿ ವರ್ಮಾ, ನಟಿ ಸಂಯುಕ್ತಾ ಹೊರನಾಡು ಸೇರಿ ನೂರಾರು ಬೆಂಬಲಿಗರು ಸಾಥ್​ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಪ್ರಕಾಶ್​ ರಾಜ್​, ನಾನು ನನ್ನ ಮನೆಗೆ ವಾಪಸ್ ಬಂದಿದ್ದೇನೆ. ಜನರ ಮುಂದೆ ರಿಪೋರ್ಟ್ ಕಾರ್ಡ್ ಇದೆ. ಇಲ್ಲಿಯವರೆಗೆ ಸಮಸ್ಯೆಗಳನ್ನು ಬಗೆಹರಿಸುವತ್ತ ಯಾರೂ ಗಮನ ಹರಿಸಿಲ್ಲ. ಪ್ರತಿ ವರ್ಷ ಜನರ ಎದುರು ರಿಪೋರ್ಟ್ ಕಾರ್ಡ್ ಇಡಬೇಕು.  ನನ್ನ ಜನ ನನ್ನನ್ನು ಖಂಡಿತಾ ಗೆಲ್ಲಿಸುತ್ತಾರೆ. ಬೇರೆಯವರ ಥರ ಒಬ್ಬರಿಗೆ 300 ರೂಪಾಯಿ ಕೊಟ್ಟು ಜನರನ್ನು ಕರೆಸುವ ಅವಶ್ಯಕತೆ ನನಗಿಲ್ಲ. ತಾವಾಗೇ ಬಂದಿರುವ ಜನ ಇವರು. ನಾನು ಮಾಡಿರುವ ಸಮಾಜಮುಖಿ ಕೆಲಸ ಜನರಿಗೆ ಗೊತ್ತಿದೆ. ಹಾಗಾಗಿ ನನ್ನನ್ನು ಆಯ್ಕೆ ಮಾಡ್ತಾರೆ ಅನ್ನೋ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಕಾಶ್ ರಾಜ್ ಹೆಂಡತಿ ಪೋನಿ ವರ್ಮಾ ಮಾತನಾಡಿ, ಪ್ರಕಾಶ್ ಯಾವಾಗಲೂ ತಾನು ಹುಟ್ಟಿದ ಊರಿನ ಅಭಿವೃದ್ಧಿ ಬಗ್ಗೆ ಆಲೋಚಿಸುತ್ತಿದ್ದರು. ಕಳೆದ ಆರೇಳು ತಿಂಗಳಿಂದ ಈ ಬಗ್ಗೆ ಆಲೋಚಿಸಿ ತೆಗೆದುಕೊಂಡ ನಿರ್ಧಾರ ಇದು. ಜನರ ಬೆಂಬಲ ನಿಜಕ್ಕೂ ದೊಡ್ಡದಿದೆ. ಪ್ರಕಾಶ್ ಜೊತೆ ಇಡೀ ಕುಟುಂಬ ಮತ್ತು ಗೆಳೆಯರ ಬಳಗ ಇದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ