ಈ ಬಾರಿ ಐಪಿಎಲ್ಗೆ ಆರ್ಸಿಬಿ ಹಾಕಿದೆ ರಾಯಲ್ ಚಾಲೆಂಜ್: ಐಪಿಎಲ್ ಗೆಲ್ಲಲು ಪಂಚತಂತ್ರ ಅನುಸರಿಸಲಿದೆ ಕೊಹ್ಲಿ ಪಡೆ

ಐಪಿಎಲ್ 12ನೇ ಆವೃತ್ತಿಗೆ ಕೇವಲ ಎರಡು ದಿನಗಳಷ್ಟೇ ಬಾಕಿ ಇದ್ದು, ಮೊದಲ ಪಂದ್ಯ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ತಾಲೀಮು ನಡೆಸುತ್ತಿದೆ. ತವರು ಅಂಗಳ ಚಿನ್ನಸ್ವಾಮಿಯಲ್ಲಿ ಕೊಹ್ಲಿ ನೇತೃತ್ವದ ಆರ್ ಸಿಬಿ ಭರ್ಜರಿ ಪ್ರಾಕ್ಟೀಸ್ ಮಾಡಿ ನೆಟ್ಸ್ ಬೆವರು ಹರಿಸುತ್ತಿದೆ. ಈ ಬಾರಿ ಶತಾಯಗತಾಯ ಕಪ್ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕೊಹ್ಲಿ ಬಳಗಗ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಎದುರಿಸಲಿದೆ.

ಈಗಾಗಲೇ ಬಲಿಷ್ಠ ಆಟಗಾರರನ್ನು ಹೊಂದಿರುವ ಆರ್ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ. ಎಬಿಡಿ ವಿಲಿಯರ್ಸ್, ಪಾರ್ಥಿವ್ ಪಟೇಲ್, ಕಾಲಿನ್ ಡಿ ಗ್ರ್ಯಾಂಡ್ಹೋಮ್ ಬ್ಯಾಟಿಂಗ್ನಲ್ಲಿ ಉಮೇಶ್ ಯಾದವ್, ಯಜುವೇಂದ್ರ ಚೌಹ್ವಾಲ್ ಬೌಲಿಂಗ್ನಲ್ಲಿ ತಂಡಕ್ಕೆ ಆಧಾರವಾಗಲಿದ್ದಾರೆ.ಅತ್ತ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಸಹ ಬಲಿಷ್ಠವಾಗಿಯೇ ಇದ್ದು ತವರು ನೆಲದಲ್ಲಿ ಗೆಲ್ಲಲೇಬೇಕಾದ ಒತ್ತಡ ವಿರಾಟ್ ಪಡೆ ಮುಂದಿದೆ. ಈ ನಿಟ್ಟಿನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬೌಲಿಂಗ್ ಕೋಚ್ ಆಶೀಶ್ ನೆಹ್ರಾರ ನೇತೃತ್ವದಲ್ಲಿ ತಂಡ ಭರ್ಜರಿ ಪ್ರಾಕ್ಟೀಸ್ ನಡೆಸುತ್ತಿದೆ.

ಐಪಿಎಲ್ ಹಂಗಾಮಕ್ಕೆ ನಾಲ್ಕೇ ದಿನ. ಪ್ರತಿ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆದ್ದೇ ಬಿಡುತ್ತೇನೋ ಅನ್ನೋವಷ್ಟರ ಮಟ್ಟಿಗೆ ಕ್ರೇಜ್ ಹುಟ್ಟಿಸುತ್ತೆ. ಆದರೆ, ಗೆಲ್ಲಲಾಗ್ತಿಲ್ಲ. ಈ ಸಾರಿ ಡೋಂಟ್ ವರಿ ಮಾಡಬೇಡಿ ಅಂತಿದೆ ಆರ್‌ಸಿಬಿ. ಕಪ್‌ ಗೆಲ್ಲೋದಕ್ಕೆ ಪಂಚತಂತ್ರ ಸಿದ್ಧವಾಗಿಟ್ಟುಕೊಂಡಿದೆ. ಆ ಪಂಚತಂತ್ರ ಯಾವುದು ಅನ್ನೊದನ್ನ ತೋರಿಸ್ತೀವಿ ನೋಡಿ.

ನಂ.1: ಎಬಿಡಿ ವಿಲಿಯರ್ಸ್
ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಇಡೀ ಸೀಸನ್ ಆರ್ಸಿಬಿ ಪರ ಆಡುತ್ತಾರೆ ಎಬಿಡಿ. ಮೈದಾನದ ಎಂಟು ದಿಕ್ಕಿಗೂ ಬೌಂಡರಿ, ಸಿಕ್ಸರ್ ಮಳೆ ಸುರಿಸಬಲ್ಲ ಸ್ಫೋಟಕ ಬ್ಯಾಟ್ಸ್‌ಮೆನ್ ಎಬಿಡಿ. ವಿಶ್ವದ ಆಘಾತಕಾರಿ ದಾಂಡಿಗ. ಐಪಿಎಲ್‌ನಲ್ಲಿ 141 ಪಂದ್ಯ ಆಡಿರುವ ಎಬಿಡಿ 150.94 ಸ್ಟ್ರೈಕ್ ರೇಟ್ ನಲ್ಲಿ 3,953 ರನ್ ಬಾರಿಸಿದ್ದಾರೆ. ಎಬಿಡಿ ಈ ಸಾರಿ ಮಿಂಚಿದ್ರೇ ಆರ್ಸಿಬಿ ಐಪಿಎಲ್ ಕಪ್‌ನ ಮೊದಲ ಬಾರಿ ಎತ್ತುವುದರಲ್ಲಿ ಡೌಟೇ ಇಲ್ಲ.

ನಂ.2 :ಮಾರ್ಕಸ್ ಸ್ಟೋಯ್ನಿಸ್
ಕಳೆದ ವರ್ಷ ಕಿಂಗ್ಸ್ ಇಲೆವನ್ ಪಂಜಾಬ್ ಪರ ಆಡಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್. ಈ ಸಾರಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಪರ ಆಡಲಿದ್ದಾರೆ. ಭಾರತದ ವಿರುದ್ಧ ಟಿ-20 ಮತ್ತು ಏಕದಿನ ಸರಣಿಗಳಲ್ಲಿ ಸಾಲಿಡ್ ಪರ್ಫಾಮನ್ಸ್ ಕೊಟ್ಟಿದ್ದಾರೆ . ಏಕಕಾಲಕ್ಕೆ ಬ್ಯಾಂಟಿಂಗ್ ಮತ್ತು ಬೌಲಿಂಗ್‌ನಲ್ಲೂ ಬೊಂಬಾಟ್ ಪರ್ಫಾಮನ್ಸ್ ಕೊಟ್ಟು ಮ್ಯಾಚ್ ವಿನ್ನರ್ ಆಗುವ ತಾಕತ್ತು ಹೊಂದಿದ್ದಾರೆ.

ಇದೇ ಫಾರ್ಮ್‌ನ IPಐನಲ್ಲೂ ಕಂಟಿನ್ಯೂ ಮಾಡಿದರೆ, ಆರ್ಸಿಬಿ ಈ ಸಾರಿ ಚೊಚ್ಚಲ ಚಾಂಪಿಯನ್ ಆಗೋದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಿಗ್ ಬ್ಯಾಷ್ ಲೀಗ್‌ಗೂ ಮೊದಲು ಸ್ಟೋಯ್ನಿಸ್ 54.89 ಸ್ಟ್ರೈಕ್ ರೇಟ್ ಹೊಂದಿದ್ರು. ಆದರೆ, ಕಳೆದ ಸೀಸನ್ ಸೇರಿ 12 ಪಂದ್ಯ ಆಡಿ 133.51ಸ್ಟ್ರೈಕ್ ರೇಟ್ ಕಾಪಾಡಿಕೊಂಡು 494 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, 14‌ ವಿಕೆಟ್ ಕೂಡ ಉರುಳಿಸಿದ್ದಾರೆ.

ನಂ.3 : ನಾಥನ್ ಕೌಲ್ಟರ್ ನೈಲ್
ಬೌಲಿಂಗ್ ಲೈನ್ಅಪ್‌ನಲ್ಲಿ ಆಸಿಸ್ ವೇಗಿ ಕೌಲ್ಟರ್ ನೈಲ್ ಇದ್ದಾರೆ. ಇದು ಬೌಲಿಂಗ್ ಪಡೆಗೆ ಆನೆಬಲ. ಭಾರತದಲ್ಲೂ ಟ್ರ್ಯಾಕ್ ರೆಕಾರ್ಡ್ ಅದ್ಭುತವಾಗಿದೆ. ಆದರೆ, ಗಾಯದ ಸಮಸ್ಯೆಯಿಂದಾಗಿ ಕಳೆದ ಬಾರಿ IPLನಲ್ಲಿ ಒಂದೇ ಒಂದು ಮ್ಯಾಚ್ ಕೂಡ ಆಡಿರಲಿಲ್ಲ ಈ ಆಸಿಸ್ ಆಟಗಾರ . ಆದರೆ, ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪರ್ಥ್ ಸ್ಕಾರ್ಚರ್ಸ್ ಪರ 13 ಪಂದ್ಯ ಆಡಿ ನಾಯ್ಲ್ 14 ವಿಕೆಟ್ ಕಬಳಿಸಿದ್ದಾರೆ. 7.45 ಎಕಾನಾಮಿರೇಟ್ ಹೊಂದಿದ್ದಾರೆ. ಭಾರತದ ಪರ ಟಿ-20 ಸರಣಿಯಲ್ಲಿ 2 ಪಂದ್ಯ ಆಡಿ 4 ವಿಕೆಟ್ ಕೆಡವಿದ್ದಾರೆ. IPLನಲ್ಲಿ 26 ಪಂದ್ಯ ಆಡಿದ ಈ ವೇಗಿ 36 ವಿಕೆಟ್ ಉರುಳಿಸಿದ್ದಾರೆ.

ನಂ.4 : ಸಿಮ್ರೋನ್ ಹೆಟ್ಮೇಯರ್
ಕಳೆದ ವರ್ಷ ಅಕ್ಟೋಬರ್- ನವೆಂಬರ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ತಂಡ, ಭಾರತ‌ ಪ್ರವಾಸ ಕೈಗೊಂಡಿತ್ತು. ಆಗ ಇದೇ ಕೆರಿಬಿಯನ್ ಪ್ಲೇಯರ್ ಒನ್ ಡೇ ಮತ್ತು ಟ-20 ಪಂದ್ಯಗಳಲ್ಲಿ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿದ್ದರು. ಕ್ರಿಸ್ ಗೇಲ್ ರೀತಿಯೇ‌ ಘಾತಕ ಬ್ಯಾಟಿಂಗ್ ಮಾಡೋದರಲ್ಲಿ ನಿಸ್ಸೀಮ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮೆನ್ ಎಂಬ ರೆಕಾರ್ಡ್ ಕೂಡ ಈತನ ಹೆಸರಲ್ಲಿದೆ.

ಕಳೆದ ವರ್ಷದ ಸೀಸನ್‌ನಲ್ಲಿ 440 ರನ್ ಸಿಡಿಸಿ ಅತ್ಯಂತ ಹೆಚ್ಚು ರನ್ ಪೇರಿಸಿದ 3ನೇ ಬ್ಯಾಟ್ಸ್‌ಮೆನ್ ಎಂಬ ಖ್ಯಾತಿಯೂ ದಕ್ಕಿದೆ. ಹೆಟ್ಮೇಯರ್ ಮೂಲಬೆಲೆ ೫೦ ಲಕ್ಷ. ಆದರೆ, ಆರ್ಸಿಬಿ ಇದೇ ಪ್ಲೇಯರ್‌ನ ₹ 4.2 ಕೋಟಿ ಕೊಟ್ಟು ಖರೀದಿಸಿದೆ.

ನಂ. 5. ಮೊಯಿನ್ ಅಲಿ
ರಾಯಲ್ ಚಾಲೆಂರ್ಸ್ ಬೆಂಗಳೂರು ತಂಡದಲ್ಲಿ ಎಂಟೆದೆಯ ಆಲ್‌ರೌಂಡರ್ ಇದ್ದಾರೆ. ಪವರ್ ಹಿಟ್ಟಿಂಗ್ ಪ್ಲೇಯರ್ ಮೊಯಿನ್‌ ಅಲಿ, ಅವಶ್ಯ ಬಿದ್ರೇ ಆಫ್ ಸ್ಪಿನ್ ಬೌಲಿಂಗ್ ಮಾಡಿ ಬ್ಯಾಟ್ಸ್‌ಮೆನ್ಗಳನ್ನ ಗಿರಿಗಿಟ್ಲೆ ಹೊಡೆಸ್ತಾರೆ. ಜೊತೆಗೆ ಆಲ್ರೌಂಡರ್ ಆಗಿರೋದ್ರಿಂದ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ನೆರವಾಗಬ್ಬಲ್ಲರು
ಒಟ್ನಲ್ಲಿ ಕಳೆದ ಹನ್ನೊಂದು ಸೀಸನ್ನಗಳಿಂದ ಐಪಿಎಲ್ ಟ್ರೋಫಿ ಗೆಲ್ಲದ ಆರ್ಸಿಬಿ ಈ ಬಾರಿಯಾದ್ರು ಪಂಚತಂತ್ರವನ್ನ ಬಳಸಿ ಗೆಲ್ಲಲ್ಲಿ ಅನ್ನೋದೆ ಆರಸಿಬಿ ಅಭಿಮಾನಿಗಳ ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ