ವೃತ್ತಿ ಜೀವನದಲ್ಲಿ ಮಾಹಿ ಎದುರಿಸಿದ ಕಠಿಣ ದಿನಗಳು ಯಾವುದು ಗೊತ್ತಾ ? ಮ್ಯಾಚ್ ಫಿಕ್ಸಿಂಗ್ ಬಗ್ಗೆ ಚೆನ್ನೈ ತಲೈವ ಧೋನಿ ಹೇಳಿದ್ದೇನು ?

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಭಾರತ ಕ್ರಿಕೆಟ್ ಪಾಲಿಗೆ ದೊಡ್ಡ ಕಪ್ಪು ಚುಕ್ಕೆ . ಇಡೀ ಕ್ರಿಕೆಟ್ ಜಗತ್ತೆ ಅಂದು ಪ್ರಕರಣವನ್ನ ನೋಡಿ ಬೆಚ್ಚಿ ಬಿದ್ದಿತ್ತು. ಈ ಪ್ರಕರಣದಿಂದ ಐಪಿಎಲ್ ಟೂರ್ನಿಯನ್ನ ಅನುಮಾನದಿಂದ ನೋಡುವಂತಾಗಿತ್ತು. ಯುವ ಆಟಗಾರರ ಪ್ರೋತ್ಸಾಹ ಕೊಡುವ ದೃಷ್ಟಿಯಿಂದ ಆರಂಭವಾದ ಈ ಟೂರ್ನಿ ಭಾರತ ಕ್ರಿಕೆಟ್ನಲ್ಲಿ ಬಿರುಗಾಳಿ ಎಬ್ಬಿಸಿತ್ತು.

2013ರಲ್ಲಿ ನಡೆಯಿತು ಸ್ಪಾಟ್ ಫಿಕ್ಸಿಂಗ್ ಪ್ರಕರಣ
ಹೊಡಿ ಬಡಿ ಐಪಿಎಲ್ ಲೀಗ್ ಟೂರ್ನಿ ಭಾರತ ಕ್ರಿಕೆಟ್ಗೆ ಹೊಸ ಚರಷ್ಮಾ ತಂದಿತ್ತು. ಭಾರತ ಕ್ರಿಕೆಟ್ ದಿಕ್ಕನ್ನೆ ಬದಲಿಸಿ ಅದೆಷ್ಟೊ ಆಟಗಾರರಿಗೆ ಜೀವನನ್ನ ಮಾಡಿಕೊಟ್ಟಿತ್ತು. ಐಪಿಎಲ್ ಎಷ್ಟು ಭಾರತ ಕ್ರಿಕೆಟ್ಗೆ ಎಷ್ಟು ಉಪಯೋಗವಾಯಿತೋ ಅಷ್ಟೆ ಮಾರಕವು ಆಯಿತು. ಇಂಡಿಯನ್ ಪ್ರೀಮಿಯರ್ ಲೀಗ್ ಕೆಲವು ಸಂದರ್ಭದಲ್ಲಿ ಇಂಡಿಯನ್ ಪ್ರಾಬ್ಲಮ್ ಲೀಗ್ ಆಗಿದ್ದು ಇದೆ.

ನೈಟ್ ಪಾರ್ಟಿ, ಆಟಗಾರರ ಅಸಭ್ಯ ವರ್ತನೆ ಇವೆಲ್ಲವೂ ಜಂಟಲ್ಮನ್ ಗೇಮ್ಗೆ ದೊಡ್ಡ ಪೆಟ್ಟು ಕೊಟ್ಟಿತ್ತು. ಐಪಿಎಲ್ ಲೀಗ್ ವ್ಯಾಪರೀಕರಣದ ರೀತಿಯಲ್ಲಿ ಕಂಡಿದ್ದರಿಂದ ಜಂಟಲ್ಮ್ಯಾನ್ ಗೇಮ್ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ಗೂ ದಾರಿ ಮಾಡಿಕೊಟ್ಟಿತ್ತು.

2013ರಲ್ಲಿ ನಡೆಯಿತು ಮ್ಯಾಚ್ ಫಿಕ್ಸಿಂಗ್
2013ರ ಐಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದ್ದು ಬೆಳಕಿಗೆ ಬಂತು. ರಾಜಸ್ತಾನ ರಾಯಲ್ಸ್ ತಂಡದ ವೇಗಿ ಎಸ್. ಶ್ರೀಶಾಂತ್ ಅವರನ್ನ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ವೇಗಿ ಎಸ್.ಶ್ರೀಶಾಂತ್ ಸೊಂಟಕ್ಕೆ ಟವಲ್ ಹಾಕಿಕೊಂಡು ಬುಕ್ಕಿಗಳಿಗೆ ಸಂಕೇತ ರವಾನಿಸುವಂತೆ ಇತ್ತು . ಈ ಅನುಮಾನದ ಮೇಲೆ ದೆಹಲಿ ಪೊಲೀಸರು ಶ್ರೀಶಾಂತ್ ತಂಡದ ಸಹ ಆಟಗಾರರಾದ ಅಂಕೀತ್ ಚೌಹಾಣ್ ಮತ್ತು ಅಜೀತ್ ಚಾಂಡೀಲಾ ಅವರನ್ನ ಬಂಧಿಸಿದ್ರು.

ಈ ಪ್ರಕರಣದ ಹಿನ್ನಲೆಯಲ್ಲಿ ಎಸ್.ಶ್ರೀಶಾಂತ್, ಸೇರಿದಂತೆ ಇಬ್ಬರು ಆಟಗಾರಿಗೆ ಕ್ರಿಕೆಟ್ ಆಡದಂತೆ ಆಜೀವ ನಿಷೇಧ ಏರಿತ್ತು. ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಸುಪ್ರೀಂ ಕೋರ್ಟ್ ಪ್ರಕರಣವನ್ನ ತನಿಖೆ ಮಾಡಲು ಮುದ್ಗಲ್ ಸಮಿತಿಯನ್ನ ನೇಮಕ ಮಾಡಿತು. ಮುದ್ಗಲ ಸಮಿತಿ ಮುಚ್ಚಿದ ಲಕೋಟೆಯಲ್ಲಿ ಐಪಿಎಲ್ ಸ್ಪಾಟ್ ಪ್ರಕರಣದಲ್ಲಿ ಏಳು ಆಟಗಾರರು ಸೇರಿದಂತೆ ಮೂರು ಆಟಗಾರರು ಭಾಗಿಯಾಗಿದ್ದರು ಎಂದು ಸುಪ್ರೀಂಗೆ ವರದಿ ನೀಡಿತ್ತು.

ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನರಾಯಲ್ಸ್ ತಂಡಕ್ಕೆ ಎರಡು ಅಮಾನತು ಶಿಕ್ಷೆ ನೀಡಿತು. ಇದು ಭಾರತ ಕ್ರಿಕೆಟ್ನ ಆಡಳಿತವನ್ನೆ ಬುಡ ಮೇಲು ಮಾಡಿತು.

ಈ ಸ್ಪಾಟ್ ಫಿಕ್ಸಿಂಗ್ನಲ್ಲಿ ಚೆನ್ನೈ ತಂಡದ ನಾಯಕ ಧೋಣಿ ಹೆಸರು ಕೂಡ ಇದೆ ಎಂದು ಹೇಳಲಾಗಿತ್ತು.

ಇಂಥ ಕಠಿಣ ಸವಾಲನ್ನ ನಾನು ಎದುರಿಸಿಲ್ಲ
ಇದೀಗ ಸ್ವತಃ ಧೋನಿ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಕುರಿತು ಮಾತನಾಡಿದ್ದಾರೆ. ಹಾಟ್ ಸ್ಟಾರ್ ನಡೆಸಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ನಿವತ್ತು ಏನೆ ಆಗಿದ್ರು, ನಾನು ಏನೆ ಸಾಧಿಸಿದ್ದರೂ ಅದು ಕ್ರಿಕೆಟ್ನಿಂದ. ನಾನು ವೈಯಕ್ತಿಕವಾಗಿ ಮಾಡಬಹುದಾದ ದೊಡ್ಡ ಕ್ರೈಂ ಅಂದ್ರೆ ಕೊಲೆ ಅಲ್ಲ ಮ್ಯಾಚ್ ಫಿಕ್ಸಿಂಗ್. ಇದನ್ನ ಒಬ್ಬ ವ್ಯಕ್ತಿ ಮಾಡಲು ಆಗಲ್ಲ. ಒಂದು ವೇಳೆ ನನ್ನ ಹೆಸರು ಇದ್ದರೆ ಇದು ದೊಡ್ಡ ಪರಿಣಾಮ ಆಗುತ್ತೆ. ಅಸಮರ್ಥನೆಯಿಂದಾಗಿ ಮ್ಯಾಚ್ ಫಿಕ್ಸ್ ಆಗಿದೆ ಅನ್ನೋದಾದ್ರೆ ಜನರು ಕ್ರಿಕೆಟ್ ಮೇಲಿರುವ ನಂಬಿಕೆಯನ್ನ ಕಳೆದುಕೊಳ್ಳುತ್ತಾರೆ. ಇದಕ್ಕಿಂತ ಕಠಿಣ ಸವಾಲನ್ನ ನನ್ನ ಜೀವನದಲ್ಲಿ ನಾನು ಎದುರಿಸಿಲ್ಲ ಎಂದಿದ್ದಾರೆ.

ತಂಡ ತಪ್ಪು ಮಾಡಿದೆಲ್ಲಿ ಎಂದು ಪ್ರಶ್ನಸಿದ ಮಾಹಿ
ಇದು ಮಿಶ್ರ ಭಾವನೆಯಾಗಿದೆ. ಇಲ್ಲಿ ಎಲ್ಲ ವಿಷಯವನ್ನ ವೈಯಕ್ತಿಕವಾಗಿ ತೆಗೆದುಕೊಳ್ಳಲಾಗುತ್ತದೆ. ತಂಡ ಎಲ್ಲಿ ತಪ್ಪು ಮಾಡಿತು ಎಂಬ ನಾಯನಾಗಿ ನನ್ನನ್ನ ಕಾಡುತ್ತದೆ.ತಂಡದಲ್ಲಿ ತಪ್ಪು ನಡೆಯುತ್ತಿತ್ತು ಅದರಲ್ಲಿ ಆಟಗಾರರು ಅಥವಾ ತಂಡದ ಸದಸ್ಯರು ಭಾಗಿಯಾಗಿದ್ರೆ ? ಏನು ತಪ್ಪು ನಡೆದಿದೆ ಅನ್ನೋದನ್ನ ನಾವು ಪರಿಶೀಲಿಸಬೇಕಿದೆ ಎಂದಿದ್ದಾರೆ.

ಅಮಾನತು ಶಿಕ್ಷೆ ನಂತರ ತಂಡ ಕಮ್ಬ್ಯಾಕ್ ಮಾಡಿದ ಬಗ್ಗೆ ಧೋನಿ ಮನದಾಳದ ಮಾತುಗಳನ್ನಾಡಿದ್ದಾರೆ.  ಪ್ರಮುಖ ವಿಷಯವೆನೆಂದರೆ ಅಭಿಮಾನಿಗಳು ಮತ್ತು ಮಾಲೀಕರ ಆತ್ಮವಿಶ್ವಾಸವನ್ನ ಕಾಪಾಡಿಕೊಳ್ಳಬೇಕು. ಪರ್ಫಾಮನ್ಸ್ ಗ್ಯಾರಂಟಿ ಕೊಡಲ್ಲ ಆದರೆ ಪ್ರಯತ್ನ ನಮಗೆ ಎಲ್ಲವನ್ನ ಕೊಡುತ್ತೆ ಎಂದು ಹೇಳಿದ್ದಾರೆ.

ಒಟ್ಟಾರೆ ಧೋನಿ ವೃತ್ತಿ ಜೀವನದಲ್ಲಿ ಎದುರಿಸಿದ ದಿನಗಳನ್ನ ಎಳೆ ಎಳಿಯಾಗಿ ಹೇಳಿ ಭಾರತ ಕ್ರಿಕೆಟ್ ನಲ್ಲಿ ಮತ್ತೊಂದು ಸಂಚಲನ ಸೃಷ್ಟಿ ಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ