ನವದೆಹಲಿ:ಚುನಾವಣೆ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ತೆರಳಲು ಅಡ್ಡಿಪಡಿಸಿದ್ದ ಪತ್ನಿಯನ್ನೇ ಸಿಆರ್ಪಿಎಫ್ ಕಾನ್ಸ್ಟೇಬಲ್ ಕೊಂದ ಘಟನೆ ಛತ್ತೀಸ್ಗಢದ ಜಗ್ದಲ್ಪುರದಲ್ಲಿ ನಡೆದಿದೆ.
ಕೋಬ್ರಾ ಬೆಟಾಲಿಯನ್ನ ಕಾನ್ಸ್ಟೇಬಲ್ ಗುರುವೀರ್ ಸಿಂಗ್ ಆರೋಪಿ. ಗುರುವೀರ್ ಸಿಂಗ್ ಸಿಆರ್ಪಿಎಫ್ನ 201 ಕೋಬ್ರಾ ಬೆಟಾಲಿಯನ್ನ ಹೆಡ್ ಕ್ವಾಟ್ರಸ್ನಲ್ಲಿ ಪತ್ನಿಯ ಜೊತೆ ವಾಸವಾಗಿದ್ದರು. ಮಾರ್ಚ್ 16ರಂದು ಕರ್ತವ್ಯಕ್ಕೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಕೋಪಗೊಂಡು ಪತ್ನಿ ಅನುಪ್ರಿಯ ಗೌತಮ್ಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ಮತ್ತು ವಿಚಾರಣೆ ಬಳಿಕ ಸತ್ಯ ಸಂಗತಿ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 301 ಹಾಗೂ 201ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
CRPF constable killed wife for stopping him from going on election duty