ಪ್ರಧಾನಿಯಾಗಬೇಕೆಂಬ ಮಹಾತ್ವಾಕಾಂಕ್ಷೆಯನ್ನು ಎಂದಿಗೂ ಬಿಡಲ್ಲ: ಮಾಯಾವತಿ

Lucknow: Bahujan Samaj Party (BSP ) supremo Mayawati waves at supporters at a rally on the occasion of 126th birth anniversary of Dr B R Ambedkar at Ambedkar Memorial in Lucknow on Friday. PTI Photo by Nand Kumar (PTI4_14_2017_000105B)

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ, ಆದರೆ ಪ್ರಧಾನಿ ಹುದ್ದೆಯ ಆಕಾಂಕ್ಷೆಯನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯನ್ನು ಸೋಲಿಸಲು ದೇಶಾದ್ಯಂತ ಚುನಾವಣೆ ಪ್ರಚಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿರುವ ಮಾಯಾವತಿ, ಲೋಕಸಭಾ ಚುನಾವಣೆಗೇನೋ ಸ್ಪರ್ಧಿಸುತ್ತಿಲ್ಲ. ಆದರೆ, ಪ್ರಧಾನಿಯಾಗಬೇಕೆನ್ನುವ ತನ್ನ ಮಹತ್ವಾಕಾಂಕ್ಷೆಯನ್ನು ಬಿಟ್ಟುಕೊಡುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವ ಕುರಿತು ಬಿಎಸ್‌ಪಿ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಅವರ ನಿರ್ಧಾರವನ್ನು ಹಿಂಪಡೆಯಲು ಹೇಳಿರುವುದಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದ ಅವರು, ಚುನಾವಣೆಯ ನಂತರ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಬಿಎಸ್‌ಪಿ ಸಂಸದರಲ್ಲಿ ಒಬ್ಬರ ಸ್ಥಾನವನ್ನು ತೆರವುಗೊಳಿಸಿ ಲೋಕಸಭೆಗೆ ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ.

1995ರಲ್ಲಿ ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾಗ ಉತ್ತರಪ್ರದೇಶ ವಿಧಾನಸಭೆ ಅಥವಾ ಪರಿಷತ್‌ಗಾಗಲಿ ಸದಸ್ಯೆಯಾಗಿರಲಿಲ್ಲ. ಅದರಂತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಂತೆಯೂ ಪ್ರಧಾನಿಯಾಗುವ ಅವಕಾಶವಿದೆ. ಪ್ರಧಾನಿಯಾದ ಆರು ತಿಂಗಳೊಳಗೆ ಲೋಕಸಭೆ ಅಥವಾ ರಾಜ್ಯಸಭೆಗೆ ಚುನಾಯಿತರಾಗಿ ಬರಬೇಕಿದೆ. ಈಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಾರದೆನ್ನುವ ನನ್ನ ನಿರ್ಧಾರದಿಂದ ನಿರಾಶೆಗೊಳ್ಳಬೇಡಿ ಎಂದು ಹೇಳಿದ್ದಾರೆ.

“Don’t Lose Heart”: Mayawati Won’t Contest But Hints She Can Still Be PM

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ