![priyanka-gandhi](http://kannada.vartamitra.com/wp-content/uploads/2019/03/priyanka-gandhi-643x381.jpg)
ಲಖ್ನೋ,ಮಾ.20- ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ಮೂರ್ಖರೆಂದು ಭಾವಿಸಬಾರದು. ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಉತ್ತರಪ್ರದೇಶದ ಎಐಸಿಸಿಯ ಪ್ರಧಾನಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಬ್ಲಾಗ್ನಲ್ಲಿ ಕಾಂಗ್ರೆಸ್ ವಿರುದ್ಧ ಹಾಗೂ ಅವರ ಕುಟುಂಬ ರಾಜಕಾರಣದ ಬಗ್ಗೆ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕ, ಜನರನ್ನು ಮೂರ್ಖರೆಂದು ತಿಳಿಯದಿರಿ. ಎಲ್ಲವನ್ನೂ ಜನತೆ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷಗಳಿಂದ ದೇಶದ ಪ್ರತಿ ಸಂಸ್ಥೆಯನ್ನು ಆಕ್ರಮಿಸಿದ್ದಾರೆ. ಇದರಲ್ಲಿ ನೀವು ಒಂದು ಭಾಗವಾಗಿದ್ದೀರಿ ಎಂಬುದನ್ನು ಅರಿಯಿರಿ ಎಂದು ತಿರುಗೇಟು ನೀಡಿದ್ದಾರೆ.
ಮೋದಿ ತಮ್ಮ ಇತ್ತೀಚಿನ ಬ್ಲಾಗ್ವೊಂದರಲ್ಲಿ ರಾಜವಂಶದ ರಾಜಕಾರಣ ದೊಡ್ಡ ಆಘಾತ ಸಂಸ್ಥೆಗಳು ಎಂದು ಕಾಂಗ್ರೆಸ್ನ ಕುಟುಂಬ ರಾಜಕಾರಣವನ್ನು ಗುರಿಯಾಗಿಸಿಕೊಂಡು, ಬಿಜೆಪಿ ಇದರ ವಿರುದ್ಧ ಹೋರಾಡುತ್ತದೆ ಎಂದು ಟ್ವೀಟ್ ಮಾಡಿದ್ದರು.