ಮಣಿಪುರ,ಮಾ.20- ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಚೇರಿಯನ್ನು ಪ್ರಚಾರ ಮಂತ್ರಿ ಕಚೇರಿಯನ್ನಾಗಿ ಪರಿವರ್ತಿಸಿ, ಅತ್ಯಾಧುನಿಕವಾದ ನಮ್ಮ ಭಾರತ ದೇಶವನ್ನು ಸಾಧಾರಣವಾಗಿಸಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ನಿನ್ನೆ ಸಂಜೆ ಮಣಿಪುರಕ್ಕೆ ಆಗಮಿಸಿರುವರ ರಾಹುಲ್, ರಾಜ್ಯ ಚಲನಚಿತ್ರ ಅಭಿವೃದ್ಧಿ ಸೊಸೈಟಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪ್ರಸ್ತಾಪಿಸುತ್ತಾ, ಪ್ರಧಾನ ಮಂತ್ರಿ ಕಚೇರಿ ಇಂದು ಪ್ರಚಾರ ಮಂತ್ರಿ ಕಚೇರಿಯಾಗಿದೆ. ಈ ಮೂಲಕ ಭಾರತದ ಅತ್ಯುನ್ನತ ಕಚೇರಿಯನ್ನು ತೀರಾ ಸಾಧಾರಣವಾಗಿಸಿ ಬಿಟ್ಟಿದ್ದಾರೆ ಎಂದು ಟೀಕಿಸಿದರು.