ಮನೆ ಮನೆಗೆ ತೆರಳಿ ಗುರುತಿನ ಚೀಟಿ ವಿತರಣ-ಪಾಲಿಕೆ ಹೆಚ್ಚುವರಿ ಆಯುಕ್ತ ಶಿವಾನಂದಮೂರ್ತಿ

ಮೈಸೂರು, ಮಾ.19- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿರುವ ಮೂರು ವಿಧಾನಸಭಾ ಕ್ಷೇತ್ರದ ಮತದಾರರ ಮನೆ ಮನೆಗೆ ತೆರಳಿ ಚುನಾವಣಾ ಗುರುತಿನ ಚೀಟಿ ವಿತರಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಶಿವಾನಂದಮೂರ್ತಿ ತಿಳಿಸಿದ್ದಾರೆ.

ಕೃಷ್ಣರಾಜ ಕ್ಷೇತ್ರದಲ್ಲಿ 2400, ಚಾಮರಾಜ ಕ್ಷೇತ್ರದಲ್ಲಿ 1700 ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ 2468 ಮಂದಿ ಹೊಸ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸೆಕ್ಟರ್, ರೆವಿನ್ಯೂ ಹಾಗೂ ಭೂತ್ ಮಟ್ಟದ ಅಧಿಕಾರಿಗಳು ಚುನಾವಣಾ ಗುರುತಿನ ಕಾರ್ಡ್‍ಗಳನ್ನು ವಿತರಿಸುವ ಜವಾಬ್ದಾರಿ ಹೊತ್ತಿದ್ದಾರೆ. ಪ್ರತಿಯೊಬ್ಬ ಮತದಾರನಿಗೂ ಗುರುತಿನ ಚೀಟಿಯನ್ನು ತಮ್ಮ ಅಧಿಕಾರಿಗಳು ತಲುಪಿಸಲಿದ್ದಾರೆ. ಹಾಗಾಗಿ ಏ.18ರಂದು ನಡೆಯಲಿರುವ ಲೋಕಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರೂ ತಪ್ಪದೆ ಮತದಾನ ಮಾಡಬೇಕೆಂದು ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ