![700-4711-Theef+](http://kannada.vartamitra.com/wp-content/uploads/2018/03/700-4711-Theef-678x381.jpg)
ಬೆಂಗಳೂರು, ಮಾ.19- ಮನೆಯೊಂದರ ಬೀಗ ಒಡೆದ ಚೋರರು 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿರುವ ಘಟನೆ ಕೋಣಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮುನೇಶ್ವರ ಲೇಔಟ್ನ ನಾಲ್ಕನೇ ಕ್ರಾಸ್ ನಿವಾಸಿ ಶ್ರೀಕಾಂತ್ ಆಚಾರ್ಯ ಎಂಬುವರು ನಾಲ್ಕು ದಿನಗಳ ಹಿಂದೆ ಕಾರ್ಯನಿಮಿತ್ತ ಮಂಗಳೂರಿಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಚೋರರು ಇವರ ಮನೆಯ ಬೀಗ ಒಡೆದು ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗಿನ ಜಾವ ಶ್ರೀಕಾಂತ್ ಅವರು ಮನೆಗೆ ವಾಪಸಾದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.