ಡಿಎಂಕೆ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಚೆನ್ನೈ: ಲೋಕಸಭಾ ಚುನಾವಣೆ ಹಿನಲೆಯಲ್ಲಿ ಡಿಎಂಕೆ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹಲವಾರು ಭರವಸೆಗಳನ್ನು ಪ್ರಕಟಿಸಿದೆ.

ಪಕ್ಷದ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಈ ವೇಳೆ ,ಮಾತನಾಡಿದ ಅವರು, ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹತ್ಯೆ ಆರೋಪದ ಮೇಲೆ 27 ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿರುವ ಏಳು ಆರೋಪಿಗಳನ್ನು ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು. ಶ್ರೀಲಂಕಾ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವುದು. ಸೇತು ಸಮುದ್ರ ಯೋಜನೆಯನ್ನು ಪುನರಾರಂಭ, ಕೊಡನ್ನಾಡು ಎಸ್ಟೇಟ್‌ ಡಕಾಯಿತಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದು ಸೇರಿದಂತೆ ಹಲವಾರು ಭರವಸೆಯನ್ನು ಪ್ರಣಾಳಿಕೆ ಹೊಂದಿದೆ ಎಂದರು

ಪಾಂಡಿಚೆರಿಗೆ ಪೂರ್ಣ ಪ್ರಮಾಣದ ಸ್ವಾಯತ್ತತೆ ಕೊಡುವುದು, ನೋಟು ಅಮಾನ್ಯೀಕರಣದ ಸಂತ್ರಸ್ತರಿಗೆ ಪರಿಹಾರ ಕೊಡುವುದು, ನೀಟ್‌(ಎನ್‌ಇಇಟಿ) ಪರೀಕ್ಷೆ ಮತ್ತು ಶಿಕ್ಷಣದ ಮೇಲಿನ ಸಾಲಮನ್ನಾ ಮಾಡುವುದು, ದಕ್ಷಿಣ ಭಾರತದ ನದಿಗಳ ಜೋಡಣೆಯ ಭರವಸೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ರದ್ದುಗೊಳಿಸಲು ಕೇಂದ್ರಕ್ಕೆ ಒತ್ತಾಯ, ನಿವೃತ್ತಿ ನಂತರದ ಪಿಂಚಣಿ ಯೋಜನೆಯ ಪುನಾರಂಭಕ್ಕೆ ಒತ್ತಾಯ, ಕಾವೇರಿ ನದಿ ಮುಖಜ ಭೂಮಿಯನ್ನು ಕೃಷಿ ವಲಯವನ್ನಾಗಿ ಮಾಡುವುದು, ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆಯನ್ನು ನಿಯಂತ್ರಿಸಲು ವ್ಯವಸ್ಥಿತ ಪ್ರೈಸಿಂಗ್ ಮೆಕ್ಯಾನಿಸಂ ಮರು ಪರಿಶೀಲನೆ, ಕೃಷಿಗಾಗಿ ಪ್ರತ್ಯೇಕ ಬಜೆಟ್‌ ಮಂಡನೆ, ಆದಾಯ ತೆರಿಗೆ ಮಿತಿಯನ್ನು 8 ಲಕ್ಷಕ್ಕೆ ಏರಿಸುವುದು ಸೇರಿದಂತೆ ಅನೇಕ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

DMK releases election manifesto with focus on State’s rights

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ