ಕಲ್ಲರ್ಫುಲ್ ಟೂರ್ನಿ ಐಪಿಎಲ್ ಲೀಗ್ ಆರಂಭಕ್ಕೂ ಮುನ್ನ ಭಾರೀ ಕುತೂಹಲ ಮೂಡಿಸಿದೆ. ಈ ಹಿಂದಿನ ಎಲ್ಲ ಸೀಸನ್ಗಳಿಗಿಂತ ವಿಭಿನ್ನವಾಗಿ ಕಾಣುತ್ತಿರುವ ಈ ಬಾರಿಯ 12ನೇ ಸೀಸನ್ ಐಪಿಎಲ್ ಇಡೀ ಕ್ರಿಕೆಟ್ ಜಗತ್ತನ್ನ ತುದಿಗಾಲಲ್ಲಿ ನಿಲ್ಲಿಸಿದೆ. ಇದೀಗ ಧೋನಿ ಸೇರಿದಂತೆ ಡೇವಿಡ್ ವಾರ್ನರ್ ಟೂರ್ನಿಗೂ ಮುನ್ನ ಅಬ್ಬರಿಸಿದ್ದಾರೆ ಅದು ಹೇಗೆ ಅನ್ನೋದನ್ನ ತೋರಿಸ್ತೀವಿ ನೋಡಿ.
ಪ್ರಾಕ್ಟೀಸ್ನಲ್ಲಿ ಸಿಕ್ಸರ್ ಬಾರಿಸಿ ಎಚ್ಚರಿಕೆ ಕೊಟ್ಟ ಚೆನ್ನೈ ತಲೈವ ಧೋನಿ
ಈ ಬಾರಿಯೂ ಐಪಿಎಲ್ ಚಾಂಪಿಯನ್ನಾಗುವ ವಿಶ್ವಾಸದಲ್ಲಿರೋ ಚಾಂಪಿಯನ್ ಪ್ಲೇಯರ್ ಧೋನಿ ಈ ಬಾರಿ ಅಬ್ಬರಿಸೋಕೆ ಸಜ್ಜಾಗಿದ್ದಾರೆ. ತಂಡದೊಂದಿಗೆ ಚೆಪಾಕ್ ಅಂಗಳಕ್ಕೆ ಬಂದಿರುವ ಮಾಹಿ ನೆಟ್ಸ್ನಲ್ಲಿ ಸಿಕ್ಸರ್ಗಳನ್ನ ಬಾರಿಸಿ ತಮ್ಮ ತಾಕತ್ತು ಏನೆಂದು ತೋರಿಸಿದ್ದಾರೆ.
ಧೋನಿ ಮಾಡ್ತಿರೋ ಪ್ರಾಕ್ಟೀಸ್ ನೋಡ್ತಿದ್ರೆ ಈ ಬಾರಿಯ ಸೀಸನ್ನಲ್ಲಿ ಧೋನಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡೋ ಸೂಚನೆ ಕೊಟ್ಟಿದ್ದಾರೆ. ಧೋನಿ ಬರೋಬ್ಬರಿ 144ಮೀಟರ್ ಸಿಕ್ಸರ್ ಬಾರಿಸಿದ್ದಾರೆ ಅನ್ನೋದೇ ವಿಶೇಷವಾಗಿದೆ.
ಭರ್ಜರಿ ಬ್ಯಾಟಿಂಗ್ ಮಾಡಿದ ಡೇವಿಡ್ ವಾರ್ನರ್
ಬಾಲ್ ಟ್ಯಾಂಪರಿಂಗ್ ಆರೋಪದ ಮೇಲೆ ಒಂದು ವರ್ಷ ಕ್ರಿಕೆಟ್ನಿಂದ ನಿಷೇಧಕ್ಕೆ ಒಳಗಾಗಿರುವ ಡೇವಿಡ್ ವಾರ್ನರ್ ಐಪಿಎಲ್ಗೆ ಮರಳಿದ್ದಾರೆ. ಈ ಬಾರಿಯ ಐಪಿಎಲ್ಗೆ ಕಮ್ಬ್ಯಾಕ್ ಮಾಡಿದ್ದು ಸನ್ ರೈಸರ್ಸ್ ತಂಡವನ್ನ ಮುನ್ನಡೆಸಲಿದ್ದಾರೆ. ಹೈದರಾಬಾದ್ ಸನ್ರೈಸರ್ಸ್ ಪರ ಅಭ್ಯಾಸ ಪಂದ್ಯದಲ್ಲಿ ರನ್ ಹೊಳೆ ಹರಿಸಿದ್ದಾರೆ. ಕೇವಲ 43 ಬಾಲ್ಗಳಲ್ಲಿ 65 ರನ್ ಸಿಡಿಸುವ ಮೂಲಕ ನನ್ನ ಬ್ಯಾಟ್ನಲ್ಲಿ ಇನ್ನೂ ಶಕ್ತಿ ಕುಂದಿಲ್ಲ ಎಂಬುದನ್ನ ತೋರಿಸಿಕೊಟ್ಟಿದ್ದಾರೆ. 32 ವರ್ಷದ ಡೇವಿಡ್ ವಾರ್ನರ್ ಇತ್ತೀಚಿಗಷ್ಟೇ ಹೈದರಾಬಾದ್ ಸನ್ರೈಸರ್ಸ್ಸ್ ತಂಡವನ್ನ ಸೇರಿಕೊಂಡಿದ್ದಾರೆ.
ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಬಾರಿಸಿದ ಹಾರ್ದಿಕ್ ಪಾಂಡ್ಯ
ಇನ್ನು ಇಂಜುರಿ ಸಮಸ್ಯೆಯಿಂದ ಚೇತರಿಸಿಕೊಂಡು ಐಪಿಎಲ್ ಆಡಲು ಸಜ್ಜಾಗಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೆಟ್ಸ್ನಲ್ಲಿ ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಹೊಡೆಯೊದನ್ನ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ವಾಂಖೆಡೆ ಅಂಗಳದಲ್ಲಿ 2011ರ ವಿಶ್ವಕಪ್ ಫೈನಲ್ ನೆನೆದ ಯುವಿ
ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿರುವ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ನಿನ್ನೆ ವಾಂಖೆಡೆ ಅಂಗಳಕ್ಕೆ ಬ್ಯಾಟಿಂಗ್ ಅಭ್ಯಾಸ ಮಾಡಲು ಬಂದಾಗ ವಿಶೇಷ ನೆನಪೊಂದನ್ನ ಬಿಚ್ಚಿಟ್ರು. ಯುವಿ ವಾಂಖೆಡೆ ಅಂಗಳಕ್ಕೆ ಬರುತ್ತಿದ್ದಂತೆ 2011ರ ವಿಶ್ವಕಪ್ ಫೈನಲ್ ಪಂದ್ಯವನ್ನ ನೆನೆದಿದ್ದಾರೆ. ಈ ಬಗ್ಗೆ ಸ್ವತಃ ತಮ್ಮ ಅನುಭವನ್ನ ಹೇಳಿಕೊಂಡಿದ್ದಾರೆ.
ಎಂಡು ವರ್ಷಗಳ ಹಿಂದೆ ಇದೇ ವಾಖೆಂಡೆ ಅಂಗಳದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಧೋನಿ ಜೊತೆಗೂಡಿ ತಂಡವನ್ನ ಗೆಲುವಿನ ದಡ ಸೇರಿಸಿ ಭಾರತಕ್ಕೆ 2ನೇ ವಿಶ್ವಕಪ್ ತಂದುಕೊಟ್ಟಿದ್ರು. ಬರೋಬ್ಬರಿ 28 ವರ್ಷಗಳ ಬಳಿಕ ಎರಡನೇ ವಿಶ್ವಕಪ್ಗೆ ಟೀಂ ಇಂಡಿಯಾ ಮುತ್ತಿಕ್ಕಿತ್ತು. ಇಡೀ ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ ಯುವರಾಜ್ ಸಿಂಗ್ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಸಿರೀಸ್ ಆಫ್ ದಿ ಪ್ಲೇಯರ್ ಆಗಿ ಹೊರ ಹೊಮ್ಮಿದ್ರು.
ರಿವರ್ಸ್ ಸಿಕ್ಸರ್ ಬಾರಿಸಿ ಸರ್ಪ್ರೈಸ್ ಕೊಟ್ಟ ಸಿಕ್ಸರ್ ಕಿಂಗ್ ಯುವಿ
ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಟೀಂ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡುವಲ್ಲಿ ವಿಫಲರಾಗಿರಬಹುದು ಆದ್ರೆ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ತಂಡದ ಪರ ಆಡುತ್ತಿದ್ದಾರೆ. ಹೀಗಾಗಿ ಯುವಿ ಹೊಸ ತಂಡದಲ್ಲಿ ಹೇಗೆ ಆಡುತ್ತಾರೆ ಅನ್ನೋ ಕುತೂಹಲ ಅಭಿಮಾನಗಳನ್ನ ಕಾಡ್ತಿದೆ. ಐಪಿಎಲ್ಗೂ ಮುನ್ನ ಯುವರಾಜ್ ಸಿಂಗ್ ಇ್ತತೀಚೆಗೆ ನಡೆದ ಟೂರ್ನಿಯೊಂದರಲ್ಲಿ ರಿವರ್ಸ್ ಸಿಕ್ಸರ್ ಬಾರಿಸಿ ಇಂಪ್ರೆಸ್ ಮಾಡಿದ್ರು. ಟಿ20 ಟೂರ್ನಿ ಕೂಡ ಆಡಿದ್ದ ಯುವಿ 80 ರನ್ ಬಾರಿಸಿ ಮಿಂಚಿದ್ರು. ಈ ಬಾರಿ ಯುವರಾಜ್ ಸಿಂಗ್ ಮುಂಬೈ ತಂಡದಲ್ಲಿ ಅಬ್ಬರಿಸೋದ್ರಲ್ಲಿ ಅನುಮಾನವೇ ಇಲ್ಲ.
ಒಟ್ಟಿನಲ್ಲಿ ಐಪಿಎಲ್ಗೂ ಮುನ್ನ ಈ ಎಲ್ಲ ಅಂಶಗಳು 12ನೇ ಸೀಸನ್ ಐಪಿಎಲ್ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿದ್ದು ಕೂತೂಹವಲವನ್ನ ಇನ್ನಷ್ಟು ಹೆಚ್ಚಿಸಿದೆ.