ರಾಜಕೀಯ ನನ್ನ ಅಜೆಂಡಾ ಅಲ್ಲ; ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ: ನಟ ಅಕ್ಷಯ್ ಕುಮಾರ್

ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಸ್ವತ: ಅಕ್ಷಯ್ ಕುಮಾರ್ ಅವರೇ ಪ್ರತಿಕ್ರಿಯೆ ನೀಡಿದ್ದು, ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಈ ಕುರಿತು ಮಾತನಾಡಿದ ಬಾಲಿವುಡ್ ನಟ ಅಕ್ಷಯ್, ನನಕೆ ರಾಜಕಾರಣದಲ್ಲಿ ಆಸಕ್ತಿಯೂ ಇಲ್ಲ, ಯಾವುದೇ ರೀತಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದೂ ಇಲ್ಲ. ರಾಜಕೀಯ ನನ್ನ ಅಜೆಂಡಾ ಅಲ್ಲ. ಸದ್ಯ ನಾನು ಸಿನಿಮಾದ ಮೂಲಕ ಮಾಡುತ್ತಿರುವ ಕಾರ್ಯವನ್ನು ರಾಜಕೀಯದಲ್ಲಿ ಮಾಡಲು ಅಸಾಧ್ಯ ಎಂದರು.

ಅಕ್ಷಯ್ ಕುಮಾರ್ ಅಮೃತ್​ಸರ್​​ ಕ್ಷೇತ್ರದಿಂದ ಬಿಜೆಪಿ ಪರವಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದರ ಜೊತೆಗೆ ಮೋದಿ ಟ್ವಿಟರ್​​ನಲ್ಲಿ ಬಾಲಿವುಡ್​ ಕಲಾವಿದರಿಗೆ ಮತದಾನದಲ್ಲಿ ಆಯಾ ನಟರ ಅಭಿಮಾನಿಗಳು ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಎಂದು ಟ್ವೀಟ್ ಮಾಡಿದ್ದರು. ಮೋದಿ ಟ್ವಿಟ್ ಗೆ ಪ್ರತಿಕ್ರಿಯಿಸಿದ್ದ ಅಕ್ಷಯ್, ಉತ್ತಮವಾಗಿ ಹೇಳಿದ್ದೀರಾ, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮತದಾನದಲ್ಲಿ ಭಾಗವಹಿಸಿದಾಗ ಮಾತ್ರವೇ ಪ್ರಜಾಪ್ರಭುತ್ವದ ಹಬ್ಬ ಸಾರ್ಥಕವಾಗಲು ಸಾಧ್ಯ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಊಹಾಪೋಹಗಳು ಆರಂಭವಾಗಿದ್ದವು.

Akshay Kumar Says ‘Politics Not on My Agenda’

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ