ಅಭಿಮಾನಿಯೊಂದಿಗೆ ಮತ್ತೆ ಕಣ್ಣಾಮುಚ್ಚಾಲೆ ಆಡಿದ ಧೋನಿ….!

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿ ಮತ್ತಮ್ಮೆ ಅಭಿಮಾನಿಯೊಂದಿಗೆ ಕಣ್ಣಾಮುಚ್ಚಾಲೆ ಅಡಿ ಸಖತ್ ಎಂಜಾಯ್ ಮಾಡಿದ್ದಾರೆ.

12ನೇ ಆವೃತ್ತಿಯ ಐಪಿಎಲ್‍ಗೆ ಸಜ್ಜಾಗುತ್ತಿರುವ ಧೋನಿ ನಿನ್ನೆ ಚೆಪಾಕ್ ಅಂಗಳದಲ್ಲಿ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಸಾಕಷ್ಟು ಅಭಿಮಾನಿಗಳು ಚೆಪಾಕ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಇದರಲ್ಲಿ ಒಬ್ಬ ಧೋನಿ ಅಭಿಮಾನಿ ಭದ್ರತೆಯನ್ನು ಬೇಧಿಸಿ ಧೋನಿಯನ್ನ ಹತ್ತಿರದಿಂದ ನೋಡಲು ಒಳಗೆ ನುಗ್ಗಿದ್ದಾನೆ.

ಒಳಗೆ ನುಗ್ಗಿದ ಅಭಿಮಾನಿ ನೇರವಾಗಿ ಧೋನಿ ಬಳಿ ಹೋಗಿದ್ದಾನೆ. ಇವನನ್ನ ಕಂಡ ಧೋನಿ ತಂಡದ ಮಾಜಿ ಆಟಗಾರ ಲಕ್ಷ್ಮಿಪತಿ ಬಳಿ ಓಡಿ ಕಣ್ಣಾಮುಚ್ಚಾಲೆ  ಆಡಿಸಿ ಸುಸ್ತು ಹೊಡೆಸಿದ್ದಾರೆ. ಕೊನೆಗೆ ಭದ್ರತಾ ಸಿಬ್ಬಂದಿಗಳು ಅಭಿಮಾನಿಯನ್ನ ತಡೆದಿದ್ದಾರೆ. ಕೊನೆಗೆ ಮಾಹಿಯೇ ಅಭಿಮಾನಿ ಬಳಿ ಬಂದು ಕೈಕುಲುಕಿ ಹೋಗಿದ್ದಾರೆ. ಸದ್ಯ ಈ ವಿಡಿಯೋ ಈಗ ವೈರಲ್ ಆಗಿದೆ.

ಇತ್ತಿಚೆಗೆ ಆಸ್ಟ್ರೇಲಿಯಾ ವಿರುದ್ದದ ಏಕದಸರಣಿ ವೇಳೆ ಕೂಡ ಇಂಥದ್ದೆ ಘಟನೆ ನಡೆದಿತ್ತು ತನ್ನ ಅಪ್ಪಿಕೊಳ್ಳಲು ಬಂದ ಅಭಿಮಾನಿಯನ್ನ ಧೋನಿ ಆಟಾಡಿಸಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ