ಚೆನ್ನೈ ತಂಡವನ್ನ ವೀಕ್ಷಿಸಿದ 12 ಸಾವಿರ ಕ್ರಿಕೆಟ್ ಅಭಿಮಾನಿಗಳು

ಮಿಲಿಯನ್ ಡಾಲರ್ ಟೂರ್ನಿಗೆ ಇನ್ನೇನು ಬೆರಳೆಣಿಕೆಯಷ್ಟು ದಿನಗಳು ಬಾಕಿ ಇದ್ದು, ಕ್ರಿಕೆಟ್ ಪ್ರಿಯರು ಟೂರ್ನಿ ಬಗ್ಗೆ ಅತ್ಯಂತ ಉತ್ಸುಕರಾಗಿದ್ದಾರೆ.

ಭಾನುವಾರದಂದು ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ತಂಡದ ಅಭ್ಯಾಸ ಪಂದ್ಯವನ್ನು ಸಾವಿರಾರು ಅಭಿಮಾನಿಗಳು ಕಣ್ತುಂಬಿಕೊಂಡರು. ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ ಇದ್ದಿದ್ದರಿಂದ ಬರೋಬ್ಬರಿ 12 ಸಾವಿರ ಮಂದಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸ ಪಂದ್ಯಾಟ ವೀಕ್ಷಿಸಿದ್ದಾರೆ.

ಇದು ಐಪಿಎಲ್ನ ಕ್ರೇಜ್ ಹಾಗೂ ಚೆನ್ನೈ ತಂಡಕ್ಕಿರುವ ಬೆಂಬಲವನ್ನು ಮತ್ತೆ ಸಾಬೀತುಪಡಿಸಿದೆ. ಎಂ.ಎಸ್.ಧೋನಿ ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಿದ್ದಂತೆ ಅಭಿಮಾನಿಗಳ ಕೂಗು ಜೋರಾಗಿತ್ತು.

ಐಪಿಎಲ್ನ ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 23ರಂದು ಜರುಗಲಿದೆ. ಈ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ