ಮಯಾಂಕ್ ಅಗರ್‍ವಾಲ್ ಮತ್ತು ಆರಂಭಿಕ ಬ್ಯಾಟ್ಸ್‍ಮನ್ ರೋಹನ್ ಕದಂ ಅವರ ತಲಾ ಅರ್ಧ ಶತಕದ ನೆರವಿನಿಂದ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಮೊದಲ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ ಗೆದ್ದುಕೊಂಡಿದೆ.
ದೇಸಿ ಟೂನಿಯಲ್ಲಿ ತನ್ನದೇ ಆದ ಗತವೈಭವವನ್ನ ಹೊಂದಿರುವ ಕರ್ನಾಟಕ ಕ್ರಿಕೆಟ್ ತಂಡ ಇದುವರೆಗೂ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯನ್ನ ಗೆದ್ದಿರಲಿಲ್ಲ. ಆದರೆ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನ ಗೆದ್ದ ಸಾಧನೆ ಮಾಡಿತ್ತು.
ಈ ಬಾರಿಯ ಟೂರ್ನಿಯಲ್ಲಿ ಒಂದು ಸೋಲನ್ನ ಕಾಣದೇ ಟ್ರೋಫಿ ಗೆದ್ದು ಕೊಂಡು ಸ್ಮರಣೀಯವಾಗಿರಿಸಿಕೊಂಡಿದೆ. ಲೀಗ್ ಏಳು ಪಂದ್ಯಗಳನ್ನ ಗೆದ್ದಿತ್ತು. ನಂತರ ಸೂಪರ್ ಲೀಗ್‍ನಲ್ಲಿ ಆಡಿದ ನಾಲ್ಕು ಪಂದ್ಯಗಳನ್ನ ಗೆದ್ದಿತ್ತು.
ನಿನ್ನೆ ಇಂದೋರ್ ಅಂಗಳದಲ್ಲಿ ನಡೆದ ಚುಟಕು ಫೈನಲ್ ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಮಹಾರಾಷ್ಟ್ರ ತಂಡ ನೌಷಧ್ ಶೇಕ್ ಅವರ ಅಜೇಯ 69 ರನ್‍ಗಳ ನೆರವಿನಿಂದ ನಿಗದಿತ ಓವರ್‍ನಲ್ಲಿ 4 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು.
155 ರನ್‍ಗಳ ಸವಾಲಿನ ಮತ್ತೊ ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಶರತ್ ಅವರ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಒಂದನೇ ಕ್ರಮಾಂಕದಲ್ಲಿ ಬಂದ ಮಯಾಂಕ್ ಅಗರ್‍ವಾಲ್ ರೋಹನ್ ಜೊತೆಗೂಡಿ ಮಹಾರಾಷ್ಟ್ರ ಬೌಲರ್‍ಗಳನ್ನ ಚೆಂಡಾಡಿ ರನ್ ಮಳೆಯನ್ನ ಸುರಿಸಿದ್ರು. ಈ ಇಬ್ಬರು ಬ್ಯಾಟ್ಸ್‍ಮನ್‍ಗಳು ತಲಾ ಅರ್ಧ ಶತಕ ಬಾರಿಸಿ ತಂಡದ ಗೆಲುವನ್ನ ಖಚಿತ ಪಡಿಸಿದ್ರು. ಕೊನೆಯಲ್ಲಿ ಕರ್ನಾಟಕ ತಂಡ 18.3 ಓವರ್‍ಗಳಲ್ಲಿ 159 ರನ್ ಗಳಿಸಿ ಗೆಲುವಿ ದಡ ಸೇರಿತು. ಚೊಚ್ಚಲ ಮುಷ್ತಾಕ್ ಅಲಿ ಟ್ರೋಫಿಗೆ ಮುತ್ತಿಕ್ಕಿತ್ತು. ಜೊತೆಗೆ ಟೂರ್ನಿಯಲ್ಲಿ 14ನೇ ಗೆಲುವು ದಾಖಲಿಸಿ ಕೋಲ್ಕತ್ತಾ ತಂಡದ ದಾಖಲೆಯನ್ನ ಸರಿಗಟ್ಟಿತ್ತು.