ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ ಅಸ್ಟ್ರೇಲಿಯಾ ವಿರುದ್ಧ 35 ರನ್‍ಗಳ ಸೋಲನ್ನ ಅನುಭವಿಸಿ 2-3 ಅಂತರದಿಂದ ಸರಣಿಯನ್ನ ಕೈಚೆಲ್ಲಿಕೊಂಡಿತ್ತು.
ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ನಡೆದ ನಿರ್ಣಾಯಕ ಐದನೇ ಏಕದಿನ ಪಂದ್ಯದಲ್ಲಿ 273 ರನ್‍ಗಳ ಸವಾಲನ್ನ ಬೆನ್ನಟ್ಟಿದ್ದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು.ನಂತರ ಬಂದ ವಿರಾಟ್ ಕೊಹ್ಲಿ ಕೂಡ ಹೆಚ್ಚು ಹೊತ್ತು ನಿಲ್ಲದೇ ಕೇವಲ 20 ರನ್‍ಗಳಿಸಿ ಪೆವಿಲಿಯನ್ ಸೇರಿದರು.
ನಂತರ ಬಂದ ರಿಷಭ್ ಪಂತ್ 16, ವಿಜಯ್ ಶಂಕರ್ 16 ರನ್ ಗಳಿಸಿ ಸಿಕ್ಕ ಅವಕಶಗಳನ್ನ ಕೈಚೆಲ್ಲಿದರು. ಇತ್ತ ಆರಂಭಿಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ ಏಕಾಂಗಿ ಹೋರಾಟ ಮಾಡ ಅರ್ಧ ಶತಕ ಬಾರಿಸಿದ್ರು. ಆದರೆ 56 ರನ್ ಗಳಿಸಿದ್ದಾಗ ರೋಹಿತ್ ಜಾಂಪಾ ಎಸೆತದಲ್ಲಿ ಸ್ಟಂಪ್ ಔಟಾಗಿ ಹೊರ ನಡೆದ್ರು. ಇದರೊಂದಿಗೆ ಟೀಂ ಇಂಡಿಯಾದ ಸೋಲು ಖಚಿತವಾಯಿತು.
ಕೊನೆಯಲ್ಲಿ ಕೇದಾರ್ ಜಾಧವ್ ಮತ್ತು ಭುವನೇಶ್ವರ್ ಕುಮಾರ್ 7ನೇ ವಿಕೆಟ್‍ಗೆ ಭರ್ಜರಿ ಬ್ಯಾಟಿಂಗ್ ಮಾಡಿ ಆಸಿಸ್ ಪಾಳೆಯದಲ್ಲಿ ಆತಂಕ ಸೃಷ್ಟಿಸಿದ್ರು. ಆದರೆ ಭುವಿ 46 ರನ್ ಗಳಿಸಿದ್ದಾಗ ಫಿಂಚ್ ಕ್ಯಾಚ್ ಕೊಡುವ ಮೂಲಕ ಹೊರ ನಡೆದ್ರು. ಕೇದಾರ ಜಾಧವ್ 44 ರನ್‍ಗಳಿಸಿದ್ರು. ಕೊನೆಗೆ ಟೀಂ ಇಂಡಿಯಾ ನಿಗದಿತ ಓವರ್‍ನಲ್ಲಿ 237 ರನ್‍ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಉಸ್ಮಾನ್ ಖ್ವಾಜಾ ಅವರ ಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು.