
ಮೈಸೂರು, ಮಾ.13- ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ ನಿನ್ನೆಯವರೆಗೂ ಅಬಕಾರಿ ಇಲಾಖೆ ಅಧಿಕಾರಿಗಳು 1ಲಕ್ಷದ 20ಸಾವಿರದ 570ರೂ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು 18ಮಂದಿ ಆರೋಪಿಗಳನ್ನು ಬಂಧಿಸಿ. 24ಮೊಕದ್ದಮೆಗಳನ್ನು ದಾಖಲಿಸಿಕೊಂಡಿದ್ದಾರೆ.
53.170ಲೀಟರ್ ಮದ್ಯ, 1950ಲೀ ಬಿಯರ್ ಹಾಗೂ 4ದ್ವಿಚಕ್ರ ವಾಹನಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.