ಕಲಬುರಗಿ,ಮಾ.13- ಶಾಸಕ ಡಾ. ಉಮೇಶ್ ಜಾಧವ್ ಅವರು ಬಿಜೆಪಿಯ ಆಮಿಷಕ್ಕೆ ಒಳಗಾಗಿ ತಮ್ಮ ರಾಜಕೀಯ ಜೀವನ ಹಾಳು ಮಾಡಿಕೊಂಡಿದ್ದಾರೆ ಅವರು ಡಾ. ಆಮಿಷ ಎಂದು ಕಾರ್ಯಕರ್ತರು ಅವರ ವಿರುದ್ಧ ಪ್ರಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಡಾಕ್ಟರೇ ಆಪರೇಷನ್ನ ಒಳಗಾಗಿದ್ದಾರೆ ಪಕ್ಷದ ತತ್ವ-ಸಿದ್ದಾಂತ ಗಾಳಿಗೆ ತೂರಿದ್ದಾರೆ ಎಂದು ಕಾರ್ಯಕರ್ತರು ಅವರ ವಿರುದ್ಧ ಚುನಾವಣಾ ಸಮರ ಮಾಡಿದ್ದಾರೆ.
ಶಾಸಕ ಉಮೇಶ್ ಜಾಧವ್ ಅವರು ಬಿಜೆಪಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧಿಸುವುದು ಬಹುತೇಕ ಖಚಿತಾಗಿದ್ದು ಕೈ ದಳದಲ್ಲಿ ತೀವ್ರ ಆತಂಕ ಮೂಡಿದೆ.